ಬೀದಿ ಕಾಳಗಕ್ಕಿಳಿದ ಇಬ್ಬರು ಅಬಕಾರಿ ಅಧಿಕಾರಿಗಳು ಸಸ್ಪೆಂಡ್

ಅಮ್ಮತ್ತಿ (TIMES OF COORG) :-  ನಿನ್ನೆ ಆಲೂರು ಸಿದ್ದಾಪುರದ ಮುಖ್ಯ ರಸ್ತೆಯಲ್ಲಿ ಬೀದಿ ಕಾಳಗಕ್ಕೆ ಇಳಿದಿದ್ದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಅಬಕಾರಿ ಉಪ ಅಧೀಕ್ಷಕ ಶಿವಪ್ಪ ಹಾಗು ಅಬಕಾರಿ ನಿರೀಕ್ಷಕ ನಟರಾಜು ನೆನ್ನೆ ರಸ್ತೆ ಮಧ್ಯೆ ಹೊಡೆದಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಟೈಮ್ಸ್ ಆಫ್ ಕೂರ್ಗ್ ವರದಿ ಪ್ರಕಟಿಸಿತ್ತು. ಅಬಕಾರಿ ಇನ್ಸ್ಪೆಕ್ಟರ್ ನಟರಾಜ್ ಮೇಲೆ ಅಬಕಾರಿ ಉಪ ಅಧೀಕ್ಷಕ ಶಿವಪ್ಪ ಅವರು ದೂರು ನೀಡಿದ್ದರು.
 ಇಂದು ಕೊಡಗು ಜಿಲ್ಲಾ ಅಬಕಾರಿ ಉಪ ಆಯುಕ್ತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.