ವರದಿ : ಕರಡಿಗೋಡು ಕೃಷ್ಣ ಸಿದ್ದಾಪುರ
ಸಿದ್ದಾಪುರ (Times Of Coorg) : ತಡವಾಗಿಯಾದರೂ ಎಚ್ಚೆತ್ತುಕೊಂಡ ಸಿದ್ದಾಪುರ ಗ್ರಾಮ ಪಂಚಾಯಿತಿ ಮತ್ತು ಆಡಳಿತ ಮಂಡಳಿಯು ವಾರದ ಮೂರು ದಿನ ಮಧ್ಯಾಹ್ನದವರೆಗಿನ ಸಂತೆಯನ್ನು ಹಲವಾರು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಲಾಯಿತು. ಇಂದು ಮುಂಜಾನೆ 6ಗಂಟೆಗೆ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಮತ್ತು ಗ್ರಾಮಪಂಚಾಯಿತಿಯ ಸಹಯೋಗದೊಂದಿಗೆ ಮುಖ್ಯ ಪಟ್ಟಣಕ್ಕೆ ಬರುವ ಎಲ್ಲಾ ಅಡ್ಡ ರಸ್ತೆಗಳನ್ನು ಮುಚ್ಚಲ್ಪಟ್ಟ ಪ್ರತಿಯೊಬ್ಬ ಗ್ರಾಹಕರನ್ನು ಏಕಮುಖ ರಸ್ತೆಯಲ್ಲಿ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿ ನಂತರ ಥರ್ರ್ಮಲ್ ಸ್ಕ್ಯಾನಿಂಗ್ ನಡೆಸಿದ ನಂತರ ಸಂತೆಯಲ್ಲಿ ತರಕಾರಿ ಖರೀದಿಗೆ ಕಳುಹಿಸಲಾಯಿತು.
ರಸ್ತೆ ಬದಿಯ ವ್ಯಾಪಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ಗ್ರಾಮ ಪಂಚಾಯಿತಿಯು ಮಾರ್ಕೆಟ್ ನ್ನು ತೆರೆದು ಏಕಮುಖ ವಾಗಿ ಹಣ್ಣು ತರಕಾರಿಗಳನ್ನು ಖರೀದಿಗೆ ಅನುವು ಮಾಡಿಕೊಟ್ಟಿದ್ದು
ತಡವಾಗಿಯಾದರು ಗ್ರಾಮಾಡಳಿತದ ಕ್ರಮ ಶ್ಲಾಘನೀಯ. ಸಬ್ ಇನ್ಸ್ಪೆಕ್ಟರ್ ಬೋಜಪ್ಪ , ಗ್ರಾಮಾಭಿವೃದ್ಧಿ ಅಧಿಕಾರಿ ವಿಶ್ವನಾಥ್ ಸ್ಥಳದಲ್ಲಿಯೇ ನಿಂತು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ವೀಕ್ಷಿಸುತ್ತಿದ್ದು ಆರೋಗ್ಯ ಇಲಾಖೆಯ ಸಹಾಯಕಿ ಸುನಿತಾ ಜೆ.ಜೆ ಆಶಾ ಕಾರ್ಯಕರ್ತೆ ಸವಿತಾ ಅಂಗನವಾಡಿ ಕಾರ್ಯಕರ್ತೆ ಸರಸು ಆಶಾ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಯಂ,ಹೆಚ್,ಮೂಸ ಹಾಜರಿದ್ದರು .
No comments
Post a Comment