"ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ " - ವ್ಯಾಪಕ ಬೆಂಬಲ : 4000 ಆಹಾರ ಕಿಟ್ ಗಳ ಹಂಚಿಕೆ

No comments
ಮಡಿಕೇರಿ (Times Of Coorg) : ಜಿಲ್ಲೆಯಲ್ಲಿನ ಕಾರ್ಮಿಕರಿಗೆ ಹಾಗೂ ತಮ್ಮ ದಿನ ನಿತ್ಯದ ಜೀವನಕ್ಕಾಗಿ ಕೂಲಿಯನ್ನೇ ಆಶ್ರಯಿಸಿದವರಿಗೆ ನೆರವು ನೀಡುವ ಉದ್ಧೇಶದಿಂದ ಜಿಲ್ಲೆಯ 05 ಕಡೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ  ಜಿಲ್ಲಾಡಳಿತವು  “ಹಸಿದ ಹೊಟ್ಟೆಗೆ-ತಣಿವು ಪೆಟ್ಟಿಗೆ” ಎಂಬ ಹೆಸರಿನಡಿ ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದ್ದು, ಸದರಿ ಕಾರ್ಯಕ್ಕೆ ಸಾರ್ವಜನಿಕರು/ಸಂಘ ಸಂಸ್ಥೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿರುತ್ತದೆ.  ಸಾರ್ವಜನಿಕರು/ಸಂಘ ಸಂಸ್ಥೆಗಳು ಮುಕ್ತ ಮನಸ್ಸಿನಿಂದ ದಿನ ಬಳಕೆಯ ಆಹಾರ ಪದಾರ್ಥಗಳನ್ನು ನೀಡಿರುತ್ತಾರೆ. 

ಮುಕ್ತ ಮನಸ್ಸಿನಿಂದ ಕೊಡುಗೆ ನೀಡಿದ ಎಲ್ಲರಿಗೂ ಜಿಲ್ಲಾಡಳಿತ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಸದರಿ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇರುವವರಿಗೆ ಜಿಲ್ಲಾಡಳಿತದಿಂದ ವ್ಯವಸ್ಥಿತವಾಗಿ ಈವರೆಗೆ 4000 ಆಹಾರ ಕಿಟ್ ಗಳನ್ನು ಹಂಚಿಕೆ ಮಾಡಲಾಗಿರುತ್ತದೆ. 

ಪುನ: ಲಾಕ್ ಡೌನ್ ಮೇ 03 2020 ರವರೆಗೆ ಮುಂದುವರೆದಿರುವುದರಿಂದ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಈ ಹಿಂದೆ ನೀಡಿದ ಸಹಕಾರವನ್ನು  ಮತ್ತೊಮ್ಮೆ ಬಯಸುತ್ತಾ, ಆಹಾರ ಪದಾರ್ಥಗಳನ್ನು ನೀಡಲು ಇಚ್ಛಿಸುವ ದಾನಿಗಳು ಸಂಬಂಧಪಟ್ಟ ತಹಶೀಲ್ದಾರರು, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ, ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

No comments

Post a Comment