ತಮಿಳುನಾಡು : ಬಾಡೂಟ ಮಾಡಿ "ಕೊರೋನಾ ಹಬ್ಬ " ಮಾಡಿದ ವ್ಯಕ್ತಿಯ ಬಂಧನ



ಚೆನ್ನೈ (ತಮಿಳುನಾಡು ) (Times Of Coorg)  : ಇಡೀ ಜಗತ್ತೇ ಕೊರೊನಾ ಮಹಾಮಾರಿಯಿಂದ ತತ್ತರಿಸಿರುವಾಗ ಇಲ್ಲೊಬ್ಬ ಭೂಪ "ಕೊರೊನಾ ಹಬ್ಬ" (ಕೊರೊನಾ ವಿರುಂಧು) ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.ತಂಜಾವೂರು ಜಿಲ್ಲೆ ಕಬಿಸ್ತಲಂ ಹೊರವಲಯದಲ್ಲಿ 29 ವರ್ಷದ ಶಿವಗುರು ಎಂಬಾತ ತನ್ನ ಸ್ನೇಹಿತರ ಜೊತೆಗೂಡಿ ಬಾಡೂಟ ಸವಿದು ಕೊರೊನಾ ಹಬ್ಬ ಮಾಡಿದ್ದಾನೆ. ಅಷ್ಟೇ ಅಲ್ಲದೆ ತಾನು ಮಾಡಿದ ಗನಂಧಾರಿ ಕೆಲಸದ ವಿಡಿಯೋವನ್ನು ಫೇಸ್​ಬುಕ್​ಗೆ ಅಪ್​ಲೋಡ್​ ಮಾಡಿದ್ದಾನೆ. 

ಬಾಡೂಟ ಸವಿಯುವ ವೇಳೆ ಶಿವಗುರು ಮತ್ತು ಆತನ ಸ್ನೇಹಿತರು ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ್ನು ಪಾಲಿಸಿಲ್ಲ ಎಂದು ತಿಳಿದು ಬಂದಿದೆ.ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಗ್ರಾಮದ ಅಭಿವೃದ್ದಿ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಶಿವಗುರುವನ್ನು ಪೊಲೀಸರು ಬಂಧಿಸಿದ್ದಾರೆ.