ಗೋಣಿಕೊಪ್ಪದಲ್ಲಿ ಪೊಲೀಸರ ಹದ್ದಿನಕಣ್ಣು : ವಾಹನಗಳ ತಪಾಸಣೆ

No comments
ವರದಿ ಶರಫುದ್ದೀನ್ ಗೋಣಿಕೊಪ್ಪ
ಗೋಣಿಕೊಪ್ಪ (Times Of Coorg) : ಕೊಡಗಿನ ವಾಣಿಜ್ಯ ನಗರವಾದ ಗೋಣಿಕೊಪ್ಪದಲ್ಲಿ ಬೆಳ್ಳಂಬೆಳಗ್ಗೆ  ಪೋಲಿಸರು ಫೀಲ್ಡ್ ಗೆ ಇಳಿದಿದ್ದು ಪ್ರತಿ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಹದ್ದಿನಕಣ್ಣು ಇಟ್ಟಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಭಾಗದಿಂದ ಹಾಗೂ ಮೈಸೂರುವಿನಿಂದ ಅಕ್ರಮವಾಗಿ ಬರಬಹುದು, ಹಾಗೂ ವಾಹನಗಳಲ್ಲಿ ಅಧಿಕಮಂದಿ ಸಂಚಾರಿಸುವ ಕುರಿತು , ಕೊರೊನ ಬಗ್ಗೆ ಮಾಸ್ಕ್ ದರಿಸದೆ ಓಡಾಡುತ್ತಿರುವ ಗುಮಾನಿ ಮೇರೆಗೆ ಪೊಲೀಸರು ವಾಹನ ತಪಾಸಣೆ ಮಾಡುವ ಮೂಲಕ, ಸಾರ್ವಜನಿಕರಲ್ಲಿ ಅರಿವು ಹಾಗು ಎಚ್ಚರವನ್ನು ಮೂಡಿಸುತ್ತ ಇದ್ದರೆ. ಹಾಗೆ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದು. ಅಕ್ರಮ ನುಸುಳಿವುಕೆ ಹಾಗೂ ನಕಲಿ ಪಾಸ್ ಬಳಸಿ ಅಥವಾ ತುರ್ತು  ಸೇವೆಗೆ ವಾಹನ ಬಳಸುವ ಅವಕಾಶವನ್ನು ಯಾರಾದರೂ ಅನವಶ್ಯಕವಾಗಿ ಬಳಸುತ್ತಿದರೆಯೇ ಎಂದು ಕಟ್ಟೆಚ್ಚರ ವಹಿಸಿ ಕಾವಲು ಬಿಗಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಗೋಣಿಕೊಪ್ಪ ಪೊಲೀಸರು  ನಗರದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.

No comments

Post a Comment