✍️ ಪವಿತ್ರ .ಹೆಚ್. ಆರ್.
(ಟೈಮ್ಸ್ ಆಫ್ ಕೂರ್ಗ್ ಲೇಖನ)
ಸ್ತ್ರೀ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು... ಎಂಬುದನ್ನು ಈಗಾಗಲೇ ಮಹಿಳೆಯರು ನಿರೂಪಿಸಿದ್ದಾರೆ... ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಸ್ತ್ರೀ ಸ್ವಾಲಂಬಿ ಜೀವನ ನಡೆಸಲು ಬೇಕಾದ ವಿಧ್ಯೇ... ಸವಲತ್ತುಗಳನ್ನು ಸಾಕಷ್ಟು ಇದೆ... ಕೆಲವು ಕಡೆ ದೌರ್ಜನ್ಯ ಪ್ರಕರಣಗಳು ಇದ್ದರು ಅದನ್ನು ಮೀರಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿದ್ದಾರೆ....ಆದರೆ ನಾನು ಈ ವಿಶ್ವ ಮಹಿಳಾ ದಿನಾಚರಣೆದಿನಂದು ಹೇಳ ಹೋರಟಿರುವುದು ನಮ್ಮ ನಾಡಿಗೆ ಸ್ವಾತಂತ್ರ್ಯ ಬರುವ ಮೊದಲೇ... ಸಾಧನೆ ಮಾಡಿದ ನಮ್ಮೂರಿನ ಸಾಹಸಿ ವಿಧವೆ ಹೆಣ್ಣುಮಗಳ ಕಥೆ.
ತುಮಕೂರು ಜಿಲ್ಲೆಯ ಬಿದರೆ ಎಂಬ ಗ್ರಾಮದಲ್ಲಿ 1880 ರಲ್ಲಿ ಮಧ್ಯವರ್ಗದ ಸಾಧಾರಾಣ ಕುಟುಂಬದಲ್ಲಿ...ಜನಿಸಿದ ಹೆಣ್ಣು ಮಗಳೇ ಸಾಕಮ್ಮ, ಈಕೆ ಬಾಲ್ಯ ದಲ್ಲಿ ಅತಿಚುರುಕು,ಮತ್ತು ತೀಕ್ಷ್ಣ ಮತಿಯಾಗಿರುತ್ತಾರೇ...ಇವರ ಚುರುಕುತನವನ್ನು ಮತ್ತು ಯಾವುದೇ ವಿಷಯವನ್ನು ಶಿಘ್ರವಾಗಿ ಗ್ರಹಿಸುವ ಶಕ್ತಿಯನ್ನು ಗಮನಿಸಿದ ಸಾಕ್ಕಮ್ಮನವರ ತಂದೆ ಆಕೆಗೆ ಒಳ್ಳೆಯ ವಿಧ್ಯಾಬ್ಯಾಸ ಕೊಡಿಸುತ್ತಾರೆ...ಅತಿ ಚುರುಕುತನ ಇದ್ದ ಸಾಕಮ್ಮ...ಬಹುಬೇಗ ಎಲ್ಲ ವಿಷಯಗಳಲ್ಲಿ ಪರಿಣಿತಿ ಸಾಧಿಸುತ್ತಾರೆ... ವಿದ್ಯಾಬ್ಯಾಸದ ನಂತರ ಆಕೆಗೆ ವರನೋಡಲು ಶುರುಮಾಡಿದಾಗಲೇ...ನಮ್ಮೂರಿನ ಒಳ್ಳೆಯ ವ್ಯಾಪಾರ ಕೌಶಲ್ಯ ಹೊಂದಿದ ಶ್ರಿಮಂತ, ನೂರಾರು ಎಕರೆ ಕಾಫಿತೋಟದ ಒಡೆಯ ಚಿಕ್ಕ ಬಸಪ್ಪ ಶೆಟ್ಟಿಯವರು ಸಾಕ್ಕಮ್ಮನವರ ಬುದ್ಧಿ ವಂತಿಗೆ ಮನಸೊತು ಮದುವೆಯಾಗಲು ಸಿದ್ದಾರಾಗುತ್ತಾರೇ.....ಈಗಾಗಲೇ ಚಿಕ್ಕ ಬಸಪ್ಪ ಶೆಟ್ಟಿಗೆ ಎರಡು ಮದುವೆ ಆಗಿ ಪತ್ನಿ ಯರು ಇರುತ್ತಾರೆ... ಇದು ತಿಳಿದ್ದಿದ್ದರೂ ಸಾಕಮ್ಮ ತಮ್ಮ ಹದಿನಾರು ವಯಸ್ಸಿಗೆ ಚಿಕಬಸಪ್ಪ ಶೆಟ್ಟಿ ಯವರನ್ನು ಮನಃಪೂರ್ವಕವಾಗಿ ವರಿಸುತ್ತಾರೇ...
ಈ ರೀತಿಯಾಗಿ ನಮ್ಮ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕಿನ ಸೊಮವಾರಪೇಟೆ ಸಾಹುಕಾರ ದೊಡ್ಡಮನೆ ಸೊಸೆಯಾಗಿ ಚಿಕ್ಕ ಬಸಪ್ಪನವರ ಮೂರನೇ ಧರ್ಮಪತಿಯಾಗಿ ನಮ್ಮೂರಿಗೆ ಕಾಲಿಡುತ್ತಾರೇ ಸಾಕಮ್ಮ,
ನಂತರ ಆಕೆಯ ಶಿಸ್ತು, ನಿಷ್ಠೆ, ಕಲಿಯುವಿಕೆಯಲ್ಲಿ ಇದ್ದ ಆಸಕ್ತಿಯನ್ನು ಗುರುತಿಸಿ.. ತಮ್ಮ ವ್ಯವಹಾರಗಳ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸುತ್ತಾರೆ ಚಿಕ್ಕ ಬಸಪ್ಪ, ಅದನ್ನು ಅಷ್ಟೇ ನಾಜೂಕಾಗಿ ನಿಭಾಯಿಸಲು ಸರ್ಮಥರಾಗುತ್ತಾರೆ, ಇತಂಹ ಸಮಯದಲ್ಲಿ ಆ ಭಗವಂತನಿಗೊ ಇವರ ಸಮೃದ್ಧಿ ಬದುಕು ಇಷ್ಟವಾಗಲಿಲ್ಲ ಅನ್ನಿಸುತ್ತೆ... ಬಸಪ್ಪವರು ಮರಣಹೊಂದುತ್ತಾರೇ ಆಗ ಸಾಕಮ್ಮನ ಮದುವೆ ಆಗಿ ಕೆವಲ ಎರಡು ವರ್ಷವಾಗಿರುತ್ತದೆ ಮಕ್ಕಳು ಇರುವುದಿಲ್ಲ ..ಇತಂಹ ಸಮಯದಲ್ಲಿ ಎಳೆಪ್ರಾಯದ ಹೆಣ್ಣು ಮಗಳಾದ ಸಾಕಮ್ಮ ಎದೆಗುಂದದೆ ಧೈರ್ಯದಿಂದ ವ್ಯಾಪಾರರವನ್ನು ನಿಭಾಯಿಸುತ್ತಿರುತ್ತಾರೆ...ಅದೆ ಸಮಯದಲ್ಲಿ ಬಸಪ್ಪನ ಮೊದಲ ಎರಡು ಪತ್ನಿಯರು ಎರಡು ವರ್ಷಗಳ ಅಂತರದಲ್ಲಿ ಸಾವನ್ನಪ್ಪುತ್ತಾರೆ...ಆಗ ಸಾಕಮ್ಮ ಅಕ್ಷರಶಃ ಕುಸಿದು ಹೋಗುತ್ತಾರೆ ,
ಇಪ್ಪತ್ತರ ಹರೆಯದಲ್ಲಿ ನೂರಾರು ಎಕರೆ ಕಾಫಿತೋಟ, ಗಂಡನ ವ್ಯಾಪಾರ ವಹಿವಾಟುಗಳುನ್ನು ಒಬ್ಬರೇ ನಿಭಾಯಿಸುವ ಪೂರ್ಣ ಪ್ರಮಾಣದ ಹೊಣೆಗಾರಿಕೆ ಈಕೆಯ ಪಾಲಗುತ್ತದೇ...ತುಂಬಾ ತೀಕ್ಷ್ಣ ಮತಿಯಾಗಿದ ಸಾಕಮ್ಮ ತಾನು ಬೇಳೆದ ಕಾಫಿಯನ್ನು ನೇರವಾಗಿ ತನ್ನ ಜನರಿಗೆ ಒದಗಿಸಬೇಕು ಎಂಬ ಯೋಚನೆಯಿಂದ ಮತ್ತು ಗಂಡನ ವ್ಯಾಪಾರವನ್ನು ಇನ್ನಷ್ಟು ಅಬಿವೃದ್ಧಿಗೊಳಿಸಬೇಕು ಎಂಬ ದೃಡ ನಿರ್ಧಾರಕ್ಕೆ ಬಂದು... ಅವರ ವ್ಯಾಪಾರವನ್ನು ಬೆಂಗಳೂರಿನ ಬಸವನಗುಡಿಗೆ 1920ರಲ್ಲಿ ವರ್ಗಾಯಿಸುತ್ತಾರೇ...ಅಲ್ಲಿ ಮೊದಲಿಗೆ ಒಂದು ಕಾಫಿ ಕ್ಯೂರಿಂಗ್ ಘಟಕವನ್ನು ಸ್ಥಾಪಿಸುತ್ತಾರೆ...ಈ ಕ್ಯೂರಿಂಗ್ ಘಟಕದಲ್ಲಿ.. ತಮ್ಮ ತೋಟದ ಕಾಫಿ ಬೀಜಗಳನ್ನು ಹುರಿದು ಪುಡಿ ಮಾಡಿ ಅದನ್ನು ಸ್ವಂತಹ ಮಾರಾಟ ಮಾಡುವ ಮಳಿಗೆಗಳನ್ನು ತೆರೆದು ಬೆಂಗಳೂರು ಜನರಿಗೆ ಮೊಟ್ಟ ಮೊದಲ ಬಾರಿಗೆ ಕೊಡಗಿನ ಕಾಫಿಯ ರುಚಿ ತೋರಿಸುತ್ತಾರೆ..ನಂತರದ ದಿನಗಳಲ್ಲಿ ಬಸವನಗುಡಿ ಕಾಫಿ ಮಳಿಗೆಗಳು ಬೆಂಗಳೂರಿನಾಂದ್ಯತ ಹಬ್ಬಿ ಕೊಳ್ಳುತ್ತವೆ ,ಬೆಂಗಳೂರು ನಗರದಲ್ಲಿ ಇದ್ದ ದೊಡ್ಡ ದೊಡ್ಡ ಉದ್ಯಮಿ ಗಳ ಸಾಲಿನಲ್ಲಿ ಸಾಕಮ್ಮ ಗುರುತಿಸಿಕೊಳ್ಳುತ್ತಾರೆ ,ಹಾಗೆ ಹೊರ ದೇಶಗಳಿಗೂ ಸಹ ಕಾಫಿಪುಡಿಯನ್ನು ರಪ್ತು ಮಾಡುವ ಕೆಲಸ ಕೈ ಹಾಕುತ್ತಾರೆ.. ಮತ್ತು ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ.... ಇವರ ತೋಟದ ಕಾಫಿಮಾತ್ರವಲ್ಲದೇ...ಕೊಡಗಿನ ನಾಂದ್ಯತ ಸುತ್ತಿ...ಒಳ್ಳೆಯ ತೋಟಗಳಿಂದ ಉತ್ತಮ ಬೆಲೆ ಕೊಟ್ಟು ಹಣ್ಣುನ್ನು ಖರಿದಿಸುತ್ತಾರೆ ಇದರಿಂದ ಸಾಕಮ್ಮ ಕೊಡಗಿನ ಮನೆ ಮನೆಯಲ್ಲಿ ಪರಿಚಿತಾವಾಗುತ್ತಾರೇ...ಬಾಲ್ಯದಿಂದಲೇ ಚುರುಕತನ ಹೊಂದಿದ ಸಾಕಮ್ಮ ಕನ್ನಡ, ಕೊಡವ,ತೆಲಗು, ಆಂಗ್ಲ.ಭಾಷೇಯಮೇಲೆ ಹಿಡಿತ ಸಾದಿಸಿರುತ್ತಾರೆ....ಈ ನಾಲ್ಕು ಭಾಷೆಯಲ್ಲಿ ನಿರ್ಗಳವಾಗಿ ಮಾತನಾಡುವುದು ಅಲ್ಲದೆ ಓದಲು ಬರೆಯಲು ಕೊಡ ಕಲಿತ್ತಿರುತ್ತಾರೇ...ಇದು ಇವರ ವ್ಯಾಪಾರಕ್ಕೆ ಸಹಾಯಕವಾಯಿತು....
ನಂತರದ ದಿನಗಳಲ್ಲಿ ಬೆಂಗಳೂರಿನ ವ್ಯಾಪಾರವನ್ನು ಮೈಸೂರಿನಲ್ಲಿಯೂ ಪ್ರಾರಂಬಿಸುತ್ತಾರೇ..ಅಲ್ಲಿಯೂ ಕೊಡ ಸಾಕಮ್ಮ ಯಶಸ್ಸು ಹೊಂದುತ್ತಾರೆ... ಇವರ ಬದ್ದತೆ,ಪುರುಗಾಮಿಸ್ವಭಾವ, ಕಾರ್ಯತ್ಪರತೆಯನ್ನು ಗಮನಿಸಿದಾ ನಾಲ್ಮಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಆಡಳಿತಾತ್ಮಕ ಸಂಪುಟಕ್ಕೆ ಮೊದಲ ಮಹಿಳಾ ಸದಸ್ಯೆಯಾಗಿ ಆಯ್ಕೆ ಮಾಡುತ್ತಾರೆ... ಅದನ್ನು ಗೌರವಪೂರ್ವಕವಾಗಿ ಒಪ್ಪಿಕೊಂಡು ಮಹಾರಾಜರು ನೀಡಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾರೇ..ಮೈಸೂರಿನ ನಗರದ ರೂಪರೇಷಗಳನ್ನು ನಿರ್ಮೀಸುವಲ್ಲಿ ಸಾಕಮ್ಮನಾ ಪಾತ್ರ ಬಹಳ ದೊಡ್ಡದು, ಇವರ ಕರ್ತವ್ಯ ನಿಷ್ಠೆ ಯನ್ನು ಗಮಿಸಿದ ಮಹಾರಾಜರು "ಲೋಕಸೇವಾ_ಪಾರಯಿಣಿ" ಎಂಬ ಬಿರದನ್ನು ಕೊಟ್ಟು ಗೌರವಿಸುತ್ತಾರೆ. ಹೀಗೆ ಸಾಕಮ್ಮನವರ ಕಾಫಿ ಉದ್ಯಮ ದೊಡ್ಡದಾಗಿ ಬೆಳೆದಂತೆ ಸಮಾಜ ಸೇವೆಕಡೆ ಮುಖಮಾಡುತ್ತಾರೆ...ಅದರಂತೆ ಬಸವನಗುಡಿಯಲ್ಲಿ ಕುರುಹೀನಶೆಟ್ಟಿ ಸಮಾಜ, ಓದುವ ಮಕ್ಕಳಿಗೆ ಹಾಸ್ಟೆಲ್, ಧರ್ಮ ಛತ್ರ ಗಳನ್ನು ಸ್ಥಾಪನೆ ಮಾಡುತ್ತಾರೆ, ವಿದ್ಯಾಬ್ಯಾಸ ಮಾಡುವ ಬಡಮಕ್ಕಳಿಗೆ ಸಾಕಷ್ಟು ಧನಸಹಾಯ ಮಾಡುವುದರ ಜೊತೆಗೆ ಅನ್ನಧಾನವನ್ನು ಮಾಡುತ್ತಾರೆ, ಅಲ್ಲದೆ. ತಮ್ಮ ಮಳಿಗೆ, ಉದ್ಯಮದಲಿ ನೂರಾರು ಜನರಿಗೆ ಉದ್ಯೋಗ ನೀಡಿ ಎಷ್ಟೂ ಮನೆ ಬೆಳಗುವ ದೀಪವಾಗತ್ತಾರೆ..
ಇವತ್ತಿಗೂ ಬಸವನಗುಡಿಯ ಕುರುಹೀನಶೆಟ್ಟಿ ಸಂಭಾಂಗಣದಲ್ಲಿ ಸಾಕಮ್ಮನವರ ಪೋಟೂ ಇದೆ,ಅಲ್ಲದೆ ಸಾಕಮ್ಮ ಗಾರ್ಡನ್ ಕೊಡ ಬಸವನಗುಡಿಯಲ್ಲಿದೆ.. ಇತಂಹ ಒಬ್ಬ ವಿಧವೆ ಮಹಿಳೆ ಅದು ಹರೆಯದ ವಯಸ್ಸಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯಮ ಕಟ್ಟಿದ್ದು ಆಗಿನ ಬಿಟ್ರೀಷ್ ಅಧಿಕಾರಿಗಳ ಕಣ್ಣು ಕುಕ್ಕಿತ್ತು...ಹೆಣ್ಣೇಂದರೆ ಅಲಂಕಾರ ಮಾಡಿಕೊಂಡು ಗಂಡಮಕ್ಕಳಿಗೆ ಅಡುಗೆ ಮಾಡಿಕೊಟ್ಟು ಕಸ ಮುಸರೇಮಾಡುವವಳು, ಇಲ್ಲ ಕಾಮದ ದಾಹತಣಿಸುವ ಭೋಗದ ವಸ್ತು ಎಂದು ಭಾವಿಸಿದ ಬ್ರಿಟಿಷ್ ಅಧಿಕಾರಿಗಳು ಸಾಕಮ್ಮ ನವರ ಧೈರ್ಯ, ಕೌಶಲ್ಯತೆ,ಉದ್ಯಮಶೀಲತೆ,ನಿಷ್ಠೆ, ಇವುಗಳಿಗೆ ಮಾರುಹೋಗಿದ್ದರು...ಅವರ ಪುರುಷ ಪ್ರಧಾನ ಸಮಾಜದಲ್ಲಿ ಸಾಕಮ್ಮನ್ನನ್ನು ಗುರುತಿಸಿ "#ಕೈಸರಿ_ಹಿಂದ್"#(#ಜುವೇಲ್_ಆಪ್ #ಇಂಡಿಯಾ) ಎಂಬ ಬಿರದನ್ನು ನೀಡಿ ಗೌರವಿಸುತ್ತಾರೆ,
ಇವತ್ತಿನ ಪುಟ್ಟಪರ್ತೀ ಸಾಯಿಬಾಬಾ ಮಂದಿರ ಮತ್ತು ನಗರ ಪ್ಲಾನ್ ನಲ್ಲಿ ಸಾಕಮ್ಮನ ಪ್ರಭಾವವಿದೆ ಎಂದು ಹೇಳಲಾಗಿದೆ, ಕಷ್ಟದ ದಿನಗಳನ್ನು ನೋಡಿದ್ದರು ಸ್ವಲ್ಪವೂ ಎದೆಗುಂದದೆ ಧೈರ್ಯವಾಗಿ ಎಲ್ಲವನ್ನೂ ಎದುರಿಸಿ ಯಶಸ್ವಿ ಉದ್ಯಮಿ ಆಗಿದ್ದು ಅಲ್ಲದೆ ತುಂಬ ಜೀವನವನ್ನು ನಡೆಸಿ 1950 ರಲ್ಲಿ ಮರಣಹೊಂದುತ್ತಾರೇ,.
ಇವರ ಕಾಲನಂತರ ಅವರ ತಂಗಿ ಮತ್ತು ಮಕ್ಕಳು ವಾರುಸುದಾರಾಗಿರುತ್ತಾರೆ.. ಈಗಲೂ ನಮ್ಮ ಸೋಮವಾರಪೇಟೆಯಲ್ಲಿ ಅವರು ವಾಸ ಮಾಡುತ್ತಿದ್ದ ಬಂಗ್ಲೇ ಇದೆ ಆದರೆ ಅಲ್ಲಿ ಯಾರು ವಾಸವಿಲ್ಲ...
ಹೀಗೆ ಒಬ್ಬ ಒಂಟಿ ಹರಯದ ವಿಧವೆ ಮಹಿಳೆ...ಮಹಿಳೆಯರಿಗೆ ಅಸ್ತಿತ್ವಯಿಲ್ಲದ ಕಾಲದಲ್ಲಿ ಒಬ್ಬ ದೊಡ್ಡ ಉದ್ಯಮಿ ಆಗಿದ್ದು ಅಲ್ಲದೆ ಕೊಡಗಿನ ಕಾಫಿ ರುಚಿಯನ್ನು ಬೆಂಗಳೂರು, ಮೈಸೂರಿನ ನ ಜನರಿಗೆ. ತೋರಿಸಿಕೊಟ್ಟಿದ್ದು......ನನ್ನ ಊರಿನ ಮಹಿಳೆ ಎಂಬುವುದೇ ನನ್ನ ಹೆಮ್ಮೆ.. ಇತಂಹ ಹೆಣ್ಣು ಮಕ್ಕಳು ಅದೇಷ್ಟು ನನ್ನಂತಹ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗುತ್ತಾರೆ.. ಆಗಲಿ ಎಂಬುದು ಕೂಡ ನನ್ನ ಆಶಯ,.
(ಸಾಕಮ್ಮನವರ ಬಂಗ್ಲೆಯ ಪೋಟೂ)
No comments
Post a Comment