ಮಾನಸಿಕ ಅಸ್ವಸ್ಥ ವ್ಯಕ್ತಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಮಾಧ್ಯಮ ಸ್ಪಂದನ ಸಫಲ

No comments
ಮಡಿಕೇರಿ (Times Of Coorg) : ಮಡಿಕೇರಿ ತಾಲೂಕಿನ ಪಾಲೆಪಾಡಿನಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಮಾಧ್ಯಮ ಸ್ಪಂದನ ಸಫಲವಾಗಿದೆ.
ಆರು ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿರುವ ಯುವಕನ ಮನೆ ಶುಕ್ರವಾರ ನೆಲಸಮಗೊಂಡಿತ್ತು. ಇದರಿಂದ ಈತ ಮತ್ತಷ್ಟು ಘಾಸಿಗೊಂಡಿದ್ದ. ತುರ್ತು ಚಿಕಿತ್ಸೆ ಬಗ್ಗೆ ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲಾ ಮಾಧ್ಯಮ ಸ್ಪಂದನ ಗಮನ ಸೆಳೆದಿದ್ದರು.
ಮಾಧ್ಯಮ ಸ್ಪಂದನ ಸದಸ್ಯರಾದ ಬಿ.ಆರ್. ಸವಿತಾ ರೈ, ಸಂತೋಷ್ ರೈ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಗಮನ ಸೆಳೆದರು.

ಜಿಲ್ಲಾ ಮಾನಸಿಕ ಘಟಕದ ಆರೋಗ್ಯಾಧಿಕಾರಿ ಡಾ.ಡೇವಿಡ್ ನೇತೃತ್ವದಲ್ಲಿ ವೈದ್ಯಕೀಯ ತಂಡ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯವಾದ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದರು. ಒಂದು ತಿಂಗಳಿಗೆ ಅಗತ್ಯವಾದ ಔಷಧಿ ನೀಡಿದರು. ಲಾಕ್ ಡೌನ್ ಅವಧಿ ಮುಗಿದ ಬಳಿಕ ಹೊರ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ವೈದ್ಯಕೀಯ ತಂಡ ಶಿಫಾರಸು ಮಾಡಿದೆ.  ಮಾಧ್ಯಮ ಸ್ಪಂದನದಿಂದ ತುರ್ತು ಸ್ಪಂದನೆ ಸಿಕ್ಕಿದೆ ಎಂದು ಪಿಡಿಒ ಎ.ಎ. ಅಬ್ದುಲ್ಲಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

No comments

Post a Comment