ವಿರಾಜಪೇಟೆ (Times Of Coorg) : ವಿರಾಜಪೇಟೆ ತಾಲೂಕು ಪುಲಿಯೇರಿ ಗ್ರಾಮದಲ್ಲಿ ಕಾಡುಕೋಣವನ್ನು ಬೇಟೆಯಾಡಿ ಮಾಂಸ ಮಾಡಿ ಸಾಗಾಟ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪುಲಿಯೇರಿ ಗ್ರಾಮದ ಮಂಡೇಪಂಡ ದೇವಯ್ಯರವರ ಪಾಳುಬಿದ್ದ ಕಾಡಿನಲ್ಲಿ ಬೇಟೆಯಾಡಿರುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ರೋಶಿಣಿ ರವರ ತಂಡ ಕಾರ್ಯಚರಣೆ ನಡೆಸಿ ಕಾಡುಕೋಣದ ಚರ್ಮ, ಕರುಳು ಮತ್ತು ಮೂಳೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಇಬ್ಬರೂ ಅರೋಪಿಗಳಾದ ಪುಲಿಯೇರಿ ಗ್ರಾಮದ ಯು. ಕೆ. ಸುಬ್ಬಯ್ಯ(45) ಮತ್ತು ಒಬ್ಬ ಅಪ್ರಾಪ್ತ ಬಾಲಕ(17)ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ದೀಲಿಪ್ ಕುಮಾರ್ ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಿವಕುಮಾರ್ ,ಅರಣ್ಯ ರಕ್ಷಕ ಅರುಣ್ ಹಾಗೂ ಆರ್. ಆರ್. ಟಿ ತಂಡದ ಅಚ್ಚಯ್ಯ, ದಿಲೀಪ, ವಿನೋದ,ರಾಚ,ಮುರುಗ,ಮಂಜು,,ಆದರ್ಶ, ವಿನೋತ್. ಪಾಲ್ಗೊಂಡಿದ್ದರು.
No comments
Post a Comment