ಸುಳ್ಳು ಮಾಹಿತಿ ನೀಡಿ ಪಾಸ್ ಪಡೆದು ಹೋಂಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು & ತುಮಕೂರು ಮೂಲದ ಐವರು ಹಾಗೂ ಹೋಮ್ ಸ್ಟೇ ಮಾಲೀಕನ ವಿರುದ್ಧ ಪ್ರಕರಣ ದಾಖಲು

No comments
ಮಡಿಕೇರಿ (Times Of Coorg)  :  ಕೋವಿಡ್-19 ಸಂಬಂಧ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು  ಸಾರ್ವಜನಿಕರಿಗೆ  ವೈದ್ಯಕೀಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿಲ್ಲ. ಆದರೆ ಈ ಸಂದರ್ಭದಲ್ಲಿ ಬೆಂಗಳೂರಿನಿಂದ ವ್ಯಕ್ತಿಯೊಬ್ಬರು ತಾಯಿಯ ಅನಾರೋಗ್ಯ ಬಗ್ಗೆ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದು ಕೊಡಗು ಜಿಲ್ಲೆಗೆ ಆಗಮಿಸಿ ಹೋಮ್ಸ್ ಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಹಾಗೂ ತುಮಕೂರು ಮೂಲದ ಐವರು ಹಾಗೂ ಹೋಮ್ಸ್ ಸ್ಟೇ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

     ದಿನಾಂಕ 16-4-2020 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ  ಹೊದ್ದೂರು ಗ್ರಾಮದಲ್ಲಿರುವ ವಿನೋದ್ ಚಿಣ್ಣಪ್ಪ ಎಂಬವರ ಹೋಂಸ್ಟೇ ಯಲ್ಲಿ ಬೆನಕಕುಮಾರ್ ಟಿ.ಕೆ. ಮತ್ತು ಸಂದೀಪ್ ಎಂಬವರ ಮುಖಾಂತರ ವಿನಯ್, ಪದ್ಮಶ್ರೀ ಹಾಗು ರಕ್ಷಿತಾ ರವರುಗಳು ತಂಗಿದ್ದು, ಇವರನ್ನು ಬೆಂಗಳೂರಿನಿಂದ ಕರೆಸಲು  ಹೋಂಸ್ಟೇ ಮಾಲಿಕ ವಿನೋದ್ ಚಿಣ್ಣಪ್ಪರವರು ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಬೆಂಗಳೂರಿನಿಂದ  ಜೌಷಧಿಯನ್ನು ತರುವ ಕಾರಣವನ್ನು ನೀಡಿ  ಶ್ರೀಮತಿ ಕೆ.ಎಸ್. ಪದ್ಮಶ್ರೀ ರವರ ಹೆಸರಿನಲ್ಲಿ ವಾಹನ ಪಾಸ್ ಪಡೆದು ವಿನಯ್ ಹಾಗು ರಕ್ಷಿತಾರವರೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಬಂದು ವಿನೋದ್ ಚಿಣ್ಣಪ್ಪನವರ ಹೋಸ್ಟೇನಲ್ಲಿ ವಾಸ್ತವ್ಯ ಹೂಡಿರುವುದನ್ನು ಪತ್ತೆಹಚ್ಚಿದ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪಿಎಸ್ಐ ಚಂದ್ರಶೇಖರ್ ಹಾಗು ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
 
       ರಾಜ್ಯದ ಇತರೆಡೆಗಳಿಂದ ಬಂದು ಕೊಡಗಿನ ಹೋಮ್ಸ್ ಸ್ಟೇ ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದು ಇದಕ್ಕೆ ಅವಕಾಶ ನೀಡುವ ಹೊಟೆಲ್, ರೆಸಾರ್ಟ್, ಹೋಮ್ಸ್ ಸ್ಟೇ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ವುದು. ಇಂತಹ ಚಟುವಟಿಕೆಗಳ ಬಗ್ಗೆ ಕೊಡಗು ಪೊಲೀಸ್ ತೀವ್ರ ನಿಗಾವಹಿಸಿದೆ.

No comments

Post a Comment