ತೆಲಂಗಾಣ ರಸ್ತೆ ಸಾರಿಗೆಯ 48000 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಿದ ತೆಲಂಗಾಣ ಸರ್ಕಾರ

No comments

ಹೈದರಬಾದ್ (TOC ನ್ಯೂಸ್) : ತೆಲಂಗಾಣ ರಾಜ್ಯ ರಸ್ತೆ ಸಾರಿಗೆಯ 4800ರಷ್ಟು ನೌಕರರನ್ನು ಕೆಲಸದಿಂದ ವಜಾಗೊಳಿಸಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆದೇಶ ಹೊರಡಿಸಿದ್ದಾರೆ . ಮುಖ್ಯಮಂತ್ರಿಯ ಈ ಜನವಿರೋಧಿ ನಡೆಯನ್ನು ಪ್ರಶ್ನಿಸಿ ಬೀದಿಗಿಳಿದಿದ್ದಾರೆ. ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಶುಕ್ರವಾರದಿಂದಲೂ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಭಾನುವಾರ ಇವರಿಗೆಲ್ಲಾ ಭಾರಿ ಶಾಕ್ ನೀಡಿದ ಸರ್ಕಾರ ಬರೋಬ್ಬರಿ 48000 ಮಂದಿ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಿದೆ.
ತೆಲಂಗಾಣ ರಸ್ತೆ ಸಾರಿಗೆಯ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ 49,340 ಮಂದಿ ನೌಕರರು ಭಾಗವಹಿಸಿದ್ದರು. ಇದರಲ್ಲಿ 48,000 ನೌಕರರನ್ನು ಸೇವೆಯಿಂದ ಏಕಾ-ಏಕಿ ವಜಾ ಮಾಡಲಾಗಿದೆ.

No comments

Post a Comment