ಬಾಗಲಕೋಟೆ (TOC ನ್ಯೂಸ್): ಅಯೋಧ್ಯೆಯಲ್ಲಿ ರಾಮಂದಿರ ಕಟ್ಟಿಯೇ ಕಟ್ಟುತ್ತೇವೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಳೇದಗುಡ್ಡ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಮಾನವೇ ಬೇಡ, ನೂರಕ್ಕೆ ನೂರು ರಾಮ ಮಂದಿರ ಕಟ್ಟಿಯೇ ಕಟ್ಟುತ್ತೇವೆ. ಸುಪ್ರೀಂ ಕೋರ್ಟ್ ರಾಮ ಮಂದಿರದ ಪರವಾಗಿಯೇ ತೀರ್ಪು ಕೊಡಬೇಕು. ಅದನ್ನ ಬಿಟ್ಟು ಸುಪ್ರೀಂ ಕೋರ್ಟಿಗೆ ಬೇರೆ ದಾರಿಯೇ ಇಲ್ಲ. ಅಲ್ಲಿರುವ ಎಲ್ಲ ದಾಖಲೆಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಈಗಿರುವ ರಾಮನ ಮೂರ್ತಿ ಜಾಗ ರಾಮ ಮಂದಿರನೇ ಎಂದು ಹಿಂದಿನ ಹೈಕೋರ್ಟ್ ಹೇಳಿದೆ. ಈಗ ಅದನ್ನ ಬದಲು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

No comments
Post a Comment