ಚಿತ್ರ ಕೃಪೆ : ಗೂಗಲ್ ಸರ್ಚ್
ಮುಂಬೈ (TOC ನ್ಯೂಸ್): ಮಹಾರಾಷ್ಟ್ರದ ಸ್ಥಳೀಯ ಬಿಜೆಪಿ ನಾಯಕ ಮತ್ತು ಅವರ ಕುಟುಂಬದ ನಾಲ್ವರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಬಿಜೆಪಿ ಕಾರ್ಪೋರೇಟರ್ ರವೀಂದ್ರ ಕಾರಟ್ (55) ಹಾಗೂ ಅವರ ಸಹೋದರ ಸುನೀಲ್ ಕಾರಟ್, ಪುತ್ರರಾದ ರೋಹಿತ್ ಮತ್ತು ಪ್ರೇಮ್ ಸಾಗರ್ ಹಾಗೂ ಸ್ನೇಹಿತ ಸುಮೀತ್ ಮೇಲೆ ಮೂವರು ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿನ ಭುಸವಾಲ ನಗರದಲ್ಲಿನ ರವೀಂದ್ರ ಅವರ ನಿವಾಸಕ್ಕೆ ನುಗ್ಗಿ ಹತ್ಯೆಗೈದಿದ್ದಾರೆ.
ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು, ಇನ್ನುಳಿದ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹಾಗೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾರೆ. ಗನ್ ಹಾಗೂ ಚಾಕು ಬಳಸಿ ಕೊಲೆಗೈದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

No comments
Post a Comment