ಮಡಿಕೇರಿ (TOC ನ್ಯೂಸ್):ಎರಡು ಸಾವಿರ ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆಗೊಳಿಸಲು ಯತ್ನಿಸಿದ ಇಬ್ಬರು ಯುವಕರು ಹಾಗೂ ಓರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್ ಗೆ ಗುರುವಾರ ಅಪರಾಹ್ನ 4 ಗಂಟೆಗೆ ಯುವಕನೋರ್ವ ಮೊಬೈಲ್ ಗೆ ಕರೆನ್ಸಿ ಹಾಕಿಸಲು ಬಂದಿದ್ದಾನೆ. ಈತ ನೀಡಿದ ಎರಡು ಸಾವಿರ ಮುಖಬೆಲೆಯ ನೋಟನ್ನು ಸೂಕ್ಷ್ಮವಾಗಿ ಗಮನಿಸಿದ ಕರೆನ್ಸಿ ಸೆಂಟರ್ ನ ಸಿಬ್ಬಂದಿ ಮುಕುಂದರವರು ಸಂಶಯಗೊಂಡು ಮಡಿಕೇರಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಆರೋಪದ ಮೇರೆಗೆ ಆರೋಪಿಗಳಾಧ ಕುಂಜಿಲ ಗ್ರಾಮದ ಅಮೀರ್ ಸೋಹೈಲ್, ನಾಲ್ಕೇರಿ ಬೇತ್ರಿಯ ಯೂನೀಸ್ ಮತ್ತು ಮತ್ತೋರ್ವ ಅಪ್ರಾಪ್ತ ಬಾಲಕನೋರ್ವನನ್ನು ಬಂಧಿಸಿ ರೂ. 2 ಸಾವಿರ ಮುಖಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

No comments
Post a Comment