ಗಾಳಿ ತುಂಬಿಸುತ್ತಿದ್ದಾಗ ಟಯರ್ ಸ್ಫೋಟ : ಓರ್ವ ಚಿಂತಾಜನಕ

No comments

ಮಡಿಕೇರಿ (TOC ನ್ಯೂಸ್) :ಗಾಳಿ ತುಂಬಿಸುತ್ತಿದ್ದಾಗ ಸ್ಪೋಟಗೊಂಡ ಜೇಸಿಬಿಯ ಟಯರ್ ಮೇಲೆ ನಿಂತಿದ್ದ ವ್ಯಕ್ತಿಯೋರ್ವ ಮೇಲಕ್ಕೆ ಎಸೆಯಲ್ಪಟ್ಟು ವಿದ್ಯುತ್ ತಂತಿಗೆ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಹಳೇ ತಾಲ್ಲೂಕಿನಲ್ಲಿ ನಡೆದಿದೆ‌ ಇಂದು ಅಪರಾಹ್ನ 4 ಗಂಟೆ ಸಮಯದಲ್ಲಿ ಕಕ್ಕಬೆಯಲ್ಲಿ ಮಣ್ಣಿನ ಕೆಲಸ ಕಾರ್ಯ ನಿರ್ವಹಿಸುತ್ತಿದ್ದ ಜೇಸಿಬಿ ಟಯರ್ ವೊಂದನ್ನು ಗಾಳಿ ತುಂಬಿಸಲೆಂದು ಮೂಲತಃ ಸೇಲಂನ ನಿವಾಸಿ ಪ್ರದೀಪ್ ಎಂಬಾತ ನಾಪೋಕ್ಲು ಹಳೇ ತಾಲ್ಲೂಕು ಬಳಿ ಇರುವ ಟಯರ್ ವರ್ಕ್ಸ್ ಗೆ ತಂದಿದ್ದಾನೆ.

 ಗಾಳಿ ತುಂಬಿಸುತ್ತಿದ್ದಾಗ ಜೇಸಿಬಿಯ ಟಯರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು, ಟಯರ್ ಮೇಲೆ ನಿಂತಿದ್ದ ಪ್ರದೀಪ್, ಟಯರ್ ಸ್ಫೋಟಿಸಿದ ಪರಿಣಾಮ ಮೇಲಕ್ಕೆ ಎಸೆಯಲ್ಪಟ್ಟಿದ್ದಾನೆ. ದುರದೃಷ್ಟವಶಾತ್ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಪ್ರದೀಪ್ ಗೆ ತಗಲಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಒಂದೆಡೆ ಟಯರ್ ಸ್ಫೋಟದಿಂದ ಮೇಲಕ್ಕೆ ನೆಗೆದು ಪುನಃ ಕೆಳಗೆ ಬಿದ್ದು ಗಾಯಗೊಂಡಿದ್ದು, ಇನ್ನೊಂದೆಡೆ ವಿದ್ಯುತ್ ತಂತಿ ತಗುಲಿರುವುದರಿಂದ ಸುಟ್ಟ ಗಾಯಕ್ಕೊಳಗಾಗಿ ಚಿಂತಾಜನಕನಾಗಿರುವ ಪ್ರದೀಪ್ ನನ್ನು ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಡಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ನಾಪೋಕ್ಲು ಎ.ಎಸ್.ಐ. ದೇವರಾಜು ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

No comments

Post a Comment