ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ನೆರೆಪೀಡಿತ ಪ್ರದೇಶಗಳಾದ ಕರಡಿಗೋಡು ಬೇತ್ರಿ ಬಲಮುರಿಯಲ್ಲಿ 300ಕುಟುಂಬಕ್ಕೆ ದವಸಧಾನ್ಯ ದಿನಬಳಕೆಯ ವಸ್ತುಗಳನ ವಿತರಣೆ

No comments

ಮಡಿಕೇರಿ : ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಕನ್ನಡ ಕಥಾಗುಚ್ಛ ಸಾಹಿತ್ಯ ಬಳಗ ಮತ್ತು ದಯಾನಂದ್ ಸಾಗರ್ ಕಾಲೇಜು ವತಿಯಿಂದ ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಮತ್ತು ನಿರ್ದೇಶಕರಾದ ಸಂತೋಷ್ ಕೋಡಂಕೇರಿ ಇವರ ಸಮ್ಮುಖದಲ್ಲಿ ಕೊಡಗಿನ ನೆರೆ ಹಾವಳಿ ಪ್ರದೇಶವಾದ ಕರಡಿಗೋಡು,, ಬೇತ್ರಿ, ಮತ್ತು ಬಲಮುರಿಯ ಸುಮಾರು 300 ಕುಟುಂಬಕ್ಕೆ ಒಂದು ವಾರಕ್ಕೆ ಬೇಕಾದ ದವಸಧಾನ್ಯ ಮತ್ತು ದಿನಬಳಕೆ ವಸ್ತುಗಳ ವಿತರಿಸಲಾಯಿತು.
    ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಮಾತನಾಡಿ ನಮ್ಮ ಕೊಡಗು ತಂಡ ಸಂಘ ಸಂಸ್ಥೆ ಗಳ ಸಹಯೋಗದೊಂದಿಗೆ ಕೊಡಗಿನ ಜನತೆಗೆ ಮಾಡುತ್ತಿರುವ ಸೇವೆ ಶ್ಲ್ಯಾಘನೀಯ ಎಂದರು. ಅಲ್ಲದೇ ನಮ್ಮ ಕೊಡಗು ತಂಡದ ಅಧ್ಯಕ್ಷರಾದ ನೌಶಾದ್ ಜನ್ನತ್ ಮಾತನಾಡಿ ಕರಡಿಗೋಡು ಗ್ರಾಮದ ನಿವಾಸಿಗಳಿಗೆ ಜಿಲ್ಲಾಡಳಿತ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈ ಗೊಳ್ಳಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಇರ್ಫಾನ್ ಹಸನ್ಕುಟ್ಟಿ, ಮಹೇಶ್, ಅಜಿತ್, ರೋಷನ್, ಮೋಹನ್, ಲೋಹಿತ್ ಹಾಗೂ ನಮ್ಮ ಕೊಡಗು ತಂಡದ ಪದಾಧಿಕಾರಿಗಳು ಭಾಗವಹಿಸಿದ್ದರು
ಕರಡಿಗೋಡು ಗ್ರಾಮದ ಮಾಜಿ ಅಧ್ಯಕ್ಷರಾದ ಯುಮುನಾ ರವರು ಮಾತನಾಡಿ ನಮ್ಮ ಕೊಡಗು ತಂಡ ಮತ್ತು ಬಂಡಿದಂತಹ ಸಂಘ ಸಂಸ್ಥೆಗಳಿಗೆ ಗ್ರಾಮದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು..

No comments

Post a Comment