ಗರಗಂದೂರು ನಾಮಫಲಕ ವಿಚಾರ ಸಂಘರ್ಷ - ನಿರಪರಾಧಿಗಳ ಮೇಲಿನ ಸುಳ್ಳು ಕೇಸು ದಾಖಲು ಖಂಡನೀಯ : SSF ಕೊಡಗು ಜಿಲ್ಲಾ ಸಮಿತಿ

No comments

ಸೋಮವಾರಪೇಟೆ (web@timesofcoorg) : ಮಾದಾಪುರ ಸಮೀಪ ಗರಗಂದೂರಿನಲ್ಲಿ ನೆನ್ನೆ ಸೋಮವಾರದಂದು ಅಲ್ಲಿನ SSF SYS ಸಂಘಟನೆಗಳು ಅಳವಡಿಸಿದ್ಧ ನಾಮಫಲಕವನ್ನು ಕೆಲವು ಕಿಡಿಗೇಡಿಗಳು ಧ್ವಂಸಗೊಳಿಸಿ ಸಂಘರ್ಷ ಸೃಷ್ಟಿಸಲು ಯತ್ನಿಸಿದ್ದಾರೆ. ಈ ಸಂಧರ್ಭ ಅಲ್ಲಿದ ಎಸ್ಸೆಸ್ಸೆಫ್ ನ ಕೆಲವು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. 

ಇದೇ ಸಮಯ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದ್ದ ಪೋಲಿಸ್ ಇಲಾಖೆಯೂ ಕೆಲವು ನಿರಪರಾಧಿ ಕಾರ್ಯಕರ್ತರ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ದಾಖಲಿಸಿದೆ. ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು ಹಾಗೂ ಸುಳ್ಳು ಕೇಸು ದಾಖಲಾಗಿರುವ ಅಮಾಯಕರ ಮೇಲಿನ ಮೊಕದ್ದಮೆಯನ್ನು ಕೈಬಿಡಬೇಕು ಎಂದು SSF ಕೊಡಗು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಘಟನೆ ನಡೆದ ಗರಂಗಂದೂರು ಗ್ರಾಮಕ್ಕೆ ಎಸ್ಸೆಸ್ಸಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಮತ್ತು ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

No comments

Post a Comment