ಸುನ್ನಿ ಸಂಘಟನೆಗಳು ಸ್ಥಾಪಿಸಿದ್ದ ನಾಮಫಲಕ ಹರಿದು ಸಂಘರ್ಷ ಸೃಷ್ಟಿಸಿದ ಸಂಘಪರಿವಾರ : ಅಮಾಯಕ SSF ಕಾರ್ಯಕರ್ತರ ವಿರುದ್ದ ಕೇಸ್ ದಾಖಲಿಸಿದ್ದು ಖಂಡನಾರ್ಹ : SDPI

No comments

SSF ನಾಮಫಲಕ ಹರಿದು ಹಾಕಿ,ಗರಗಂದೂರಿನಲ್ಲಿ ಗಲಭೆ ಸೃಷ್ಟಿಸಿದ ಸಂಘಪರಿವಾರದ ವಿರುದ್ಧ ಕೇಸ್ ದಾಖಲಿಸದೆ,ಅಮಾಯಕ SSF ಕಾರ್ಯಕರ್ತರ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದು ಖಂಡನಾರ್ಹ:-SDPI

 ಪೋಲಿಸ್ ಇಲಾಖೆಯು ಸಂಘದ ಗೂಂಡಾಗಳೊಂದಿಗೆ ಮೃದು ಧೋರಣೆ ತೋರಿರುವುದೇ ಇಂತಹ ದುಷ್ಕೃತ್ಯಗಳು ಪುನರಾವರ್ತನೆ ಯಾಗಲು ನೇರ ಕಾರಣ:-ಉಸ್ಮಾನ್ ಸುಂಟಿಕೊಪ್ಪ

ಸುಂಟಿಕೊಪ್ಪ,Oct 05:- ಸಂಘಪರಿವಾರದ ಗೂಂಡಾಗಳು ಪೂರ್ವ ಯೋಜಿತವಾಗಿ ಮಾರಕಾಸ್ತ್ರಗಳೊಂದಿಗೆ ಮಾದಾಪುರದಿಂದ ಗರಂಗಂದೂರಿಗೆ ಆಗಮಿಸಿ "ಮಸೀದಿಗೆ ಮತ್ತು ಮಂದಿರಕ್ಕೆ ಹೋಗುವ ದಾರಿಯಲ್ಲಿ SSF ಹೆಸರಿನಲ್ಲಿದ್ದ ನಾಮಫಲಕವನ್ನು  ಕಿತ್ತು ಬಿಸಾಕಿ ನಯಾಝ್ ಮತ್ತು ರಶೀದ್  ಎಂಬ ಯುವಕರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಯತ್ನಿಸಿದಲ್ಲದೆ ಸಂತ್ರಸ್ತ ಯುವಕರ ವಿರುದ್ಧವೇ ಪೋಲಿಸ್ ಇಲಾಖೆಯು ಸ್ಥಳೀಯ ಶಾಸಕರ  ಒತ್ತಡಕ್ಕೆ ಬಲಿಯಾಗಿ ಸುಳ್ಳು ಪ್ರಕರಣ ದಾಖಲು ಮಾಡಿದ ಕ್ರಮವನ್ನು ಮತ್ತು  ಸಂಘಪರಿವಾರ ಗೂಂಡಾಗಳ ಕ್ರೌರ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಡಿಕೇರಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಬಂದಿಸಬೇಕೆಂದು ಒತ್ತಾಯಿಸಿದ್ದಾರೆ.

ಸುಂಟಿಕೊಪ್ಪ ಸಮೀಪದ ಗರಗಂದೂರು ಎಂಬಲ್ಲಿ ಮಸೀದಿ ಹಾಗು ಮಂದಿರಕ್ಕೆ ತೆರಳುವ ರಸ್ತೆ ಈ ಹಿಂದೆ ವಿವಾದಿತವಾಗಿತ್ತು,ನಂತರ ಸರ್ವ ನಾಗರಿಕರ ಒಪ್ಪಿಗೆ ಮೇರೆಗೆ ಪರಸ್ಪರ ಮಾತುಕತೆಯ ಮೂಲಕ  ಮಲ್ಲಿಕಾರ್ಜುನ ಕಾಲೋನಿ ಎಂದು  ನಾಮಕರಣ ಮಾಡಿ ದ್ವಾರ ನಿರ್ಮಾಣ ಮಾಡಲಾಗಿ ನಿನ್ನೆ ಮಡಿಕೇರಿ ಶಾಸಕರ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಗಿತ್ತು.

ಆದರೆ ಶಾಂತಿಯುತವಾಗಿರುವ ಗರಗಂದೂರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಮಾದಾಪುರದಿಂದ ಬಂದ ಭಜರಂಗದಳದ ಗೂಂಡಾಗಳು  ಆ ಹೆಸರನ್ನು  ಬದಲಿಸಿ ಬೇರೆ  ಹೆಸರು ಇಡಲು ಯತ್ನಿಸಿದಾಗ ಸ್ಥಳೀಯರ ವಿರೋಧದಿಂದ ಅವರ ದುರುದ್ದೇಶ ಈಡೇರದೆ ಇದ್ದ  ಸಂದರ್ಭದಲ್ಲಿ ನಿಯಾಝ್ ಎಂಬ ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಮೀಪದ ರಸ್ತೆಯ ಬದಿಯಲ್ಲಿದ್ದ *"SSF ಹೆಸರಿನಲ್ಲಿದ್ದ ಮಸೀದಿ ಹಾಗು ಮಂದಿರಕ್ಕೆ ಹೊಗುವ ರಸ್ತೆ ಎಂಬ ನಾಮಫಲಕವನ್ನು ಕಿತ್ತು ಬಿಸಾಕಿ ಗಲಬೆ ನಡೆಸಲು ಸಂಚು ರೂಪಿಸುತ್ತಾರೆ".*

ಈ ವಿಚಾರ ಅರಿತ ಸ್ಥಳೀಯರು ಠಾಣೆಗೆ ದೂರನ್ನು ನೀಡಿದಾಗ ಪೋಲಿಸರು ಎರಡು ಗುಂಪನ್ನು ಠಾಣೆಗೆ ಕರೆಸಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿ  ಮಾದಾಪುರದ  ಬಜರಂಗದಳದ ಕಾರ್ಯಕರ್ತರಿಗೆ "ಪುನಃ ನೀವು ಗರಗಂದೂರಿಗೆ ತೆರಳಿ ಗಲಭೆ ನಡೆಸಬಾರದೆಂದು ಲಿಖಿತ ರೂಪದಲ್ಲಿ ಬರೆಸಿಕೊಂಡು ತಾಕೀತು ಮಾಡಿ ಕಳಿಸಿದ್ದರು. 


ಆದರೆ ಆ ಗೂಂಡಾಗಳು ಪುನಃ ಮೂರು ವಾಹನಗಳಲ್ಲಿ ಪೂರ್ವಯೋಜಿತವಾಗಿ ಮಾರಕಾಸ್ತ್ರಗಳೊಂದಿಗೆ ಗರಗಂದೂರಿಗೆ ತೆರಳಿ ಗಲಭೆ ಎಬ್ಬಿಸಿ ರಶೀದ್ ಎಂಬವನಿಗೆ ಮತ್ತು ಕೆಲವು ಯುವಕರಿಗೆ ಮಾರಕಾಯುಧಗಳಲ್ಲಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ಗಲಭೆ ಸೃಷ್ಟಿಸಿದ್ದಾರೆ. ಸಂಘಪರಿವಾರದ ಈ ಬೀಬತ್ಸ ಕೃತ್ಯವನ್ನು  SDPI ತೀವ್ರವಾಗಿ ಖಂಡಿಸುತ್ತದೆ.


ಆದರೆ ವಿಪರ್ಯಾಸವೆಂದರೆ ಗಲಭೆ ನಡೆಸಿದ ಸಂಘದ ಗೂಂಡಾಗಳ ವಿರುದ್ಧ ಠಾಣೆಯಲ್ಲಿ ಜಾಮೀನು ನೀಡುವ ಸಣ್ಣ ಪ್ರಕರಣ ದಾಖಲಿಸಿ,ಮಾರಕಾಸ್ತ್ರಗಳಿಂದ ಏಟು ತಿಂದ ಅಮಾಯಕ  SSF ಕಾರ್ಯಕರ್ತರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಸುಳ್ಳು ಕೇಸ್ ದಾಖಲು ಮಾಡಿದ್ದು ಖಂಡನಾರ್ಹ ವಾಗಿದೆ.


ಇದು ಪೋಲಿಸರ ತಾರತಮ್ಯ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.


ಈ ಸಂಘಪರಿವಾರದ ಗೂಂಡಾಗಳು ಈ ಹಿಂದೆಯೂ ದನದ ಮಾಂಸದ ಹೆಸರಿನಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿ ಕ್ರೌರ್ಯತೆ ಮೆರೆದವರಾಗಿದ್ದಾರೆ‌.ಅದಲ್ಲದೇ ಮಾದಪುರ ಮತ್ತು ಇನ್ನಿತರ ಕಡೆಗಳಲ್ಲಿ ಸದಾ ಇಂತಹ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡವರಾಗಿದ್ದಾರೆ.ಆದರೆ ಪೋಲಿಸರು ಇವರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಮೃದು ಧೋರಣೆ ತೋರಿದ ಕಾರಣದಿಂದ ಇವರ ಗೂಂಡಾ ಪ್ರವೃತ್ತಿ ಪುನಃ ಮುಂದುವರಿಯಲು ಪೋಲಿಸ್ ಇಲಾಖೆಯೇ ನೇರ ಕಾರಣವಾಗಿದೆ.

 ಪೋಲಿಸ್,ಕಾನೂನು ,ಸಂವಿಧಾನಕ್ಕೆ ಬೆಲೆ ಕಲ್ಪಿಸದೆ ಗಲೆಭೆ ಎಬ್ಬಿಸಲು ಮುಂದಾದ ಬಜರಂಗದಳದ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು,ಅಮಾಯಕ SSF ಕಾರ್ಯಕರ್ತರ ವಿರುದ್ಧ ದಾಖಲು ಮಾಡಿರುವ ಸುಳ್ಳು ಅಟ್ರಾಸಿಟಿ ಕೇಸ್ ನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಸುಂಟಿಕೊಪ್ಪ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ.

ಹಾಗೂ ಮುಂದೆ ನಡೆಯುವ ಎಲ್ಲಾ ಅನಾಹುತಗಳಿಗೆ ಪೋಲಿಸ್ ಇಲಾಖೆಯೆ ನೇರ ಹೊಣೆಯಾಗಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Post a Comment