ಲಖೀಂಪುರ ಹಿಂಸಾಚಾರ : ಮೃತಪಟ್ಟ ರೈತರ ಸಂಬಂಧಿಕರನ್ನು ಭೇಟಿಯಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ

No comments

ರಾಷ್ಟ್ರೀಯ ಸುದ್ದಿ (web@timesofcoorg) : ರಾಹುಲ್ ಗಾಂಧಿ ನೇತೃತ್ವದ ಐದು ಸದಸ್ಯರ ಕಾಂಗ್ರೆಸ್ ಪಕ್ಷದ ನಿಯೋಗವು ಬುಧವಾರ,( ಅಕ್ಟೋಬರ್ 6) ರಂದು ಲಖಿಂಪುರದಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿ ಮಾಡಿತು. ಸೋಮವಾರದಿಂದ ಸೀತಾಪುರದಲ್ಲಿ ಬಂಧಿತರಾಗಿದ್ದ ರಾಹುಲ್ ಗಾಂಧಿಯ ಸಹೋದರಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ಸಂಜೆ ನಿಯೋಗವನ್ನು ಸೇರಿದ್ದರು.

ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ಲಖಿಂಪುರಕ್ಕೆ ತೆರಳುತ್ತಿದ್ದಾಗ ಮೊರಾದಾಬಾದ್ ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಲಖಿಂಪುರದಲ್ಲಿ ಭಾನುವಾರ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ರೈತರ ಮೇಲೆ ಕಾರು ಚಲಾಯಿಸಿದ್ದ ಕೇಂದ್ರ ಸಚಿವ ಅಜಯ್ ಟೆನಿ ಮಿಶ್ರಾ ಅವರ ಮಗನ ವಿರುದ್ಧ ಕೊಲೆ ಮತ್ತು ಗಲಭೆ ಆರೋಪದಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೂಲ : ದ ಕ್ವಿಂಟ್


No comments

Post a Comment