ನೆಲ್ಯಹುದಿಕೇರಿ (web@timesofcoorg) : ಎಸ್ಎಸ್ಎಫ್ ಜಿಲ್ಲಾ ಸಮಿತಿಯಲ್ಲಿ ಕಾರ್ಯಾಚರಿಸಿದ ಹಳೆಯ ನಾಯಕರನ್ನು ಒಗ್ಗೂಡಿಸಿ ಕೊಡಗು ಜಿಲ್ಲಾ ಸಮಿತಿ ವತಿಯಿಂದ "ರೂಟ್ಸ್ ಆಫ್ ಕೂರ್ಗ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೆಲ್ಯಾಹುದಿಕೇರಿಯಲ್ಲಿ ಪ್ರಸ್ತುತ ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ನಾಯಕರು ಭಾಗವಹಿಸಿ ತಮ್ಮ ಹಿಂದಿನ ನೆನಪುಗಳನ್ನು ಮೆಲುಕುಹಾಕುತ್ತಾ ಹಾಲಿ ಸಮಿತಿಯ ಉತ್ತಮ ಕಾರ್ಯಾಚರಣೆಗಾಗಿ ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ತಿಳಿಸಿದರು.
ನೆಲ್ಯಾಹುದಿಕೇರಿಯ ಕೋಫಿಯ ರೆಸ್ಟೋರೆಂಟ್‌ನಲ್ಲಿ ನೆನ್ನೆ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ವಹಿಸಿ ಪ್ರಸ್ತುತ ಜಿಲ್ಲಾ ಸಮಿತಿಯು ಸಾಂಘಿಕ ರಂಗದಲ್ಲಿ ನಡೆಸಿದ ಅಭಿವೃದ್ಧಿಯನ್ನು ಮಾಜಿ ನಾಯಕರ ಮುಂದೆ ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹನೀಫ್ ಸಖಾಫಿ ಕೊಂಡಂಗೇರಿ ನಿರ್ವಹಿಸಿ ನಮ್ಮಿಂದ ಅಗಲಿದ ನಾಯಕರನ್ನು ಸ್ಮರಿಸಿದರು.ಮಾಜಿ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿರವರು ಇತ್ತೀಚೆಗೆ ನಮ್ಮನ್ನಗಲಿದ ಶೈಖುನಾ ಮಹ್‌ಮೂದ್ ಉಸ್ತಾದರ ಕುರಿತು ಅನುಸ್ಮರಣಾ ಭಾಷಣ ನಡೆಸಿದರು.
ಈ ಅಪೂರ್ವ ಕಾರ್ಯಕ್ರಮದಲ್ಲಿ ಅಲಿ ಸಅದಿ ಹುಂಡಿ ಪ್ರಾರ್ಥನೆ ನಿರ್ವಹಿಸಿದರು. ಅಡ್ವೊಕೇಟ್ ಕುಂಞಿ ಅಬ್ದುಲ್ಲಾ, ಮುಹಮ್ಮದ್ ಹಾಜಿ ಕುಂಜಿಲ, ಹಸೈನಾರ್ ಸಖಾಫಿ,ಹಮೀದ್ ಮುಸ್ಲಿಯಾರ್,ಕರೀಂ ಫಾಝಿಲಿ,ಮುಬಶ್ಶಿರ್ ಅಹ್ಸನಿ,ಹಂಝ ನೆಲ್ಯಾಹುದಿಕೇರಿ,ವಿ ಪಿ ಮೊಯಿದಿನ್,ಶರೀಫ್ ಹೊಸತೋಟ ಮುಂತಾದ ನಾಕರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಸ್ವಾಗತ ಕೋರಿದರೆ ಝುಬೈರ್ ಸಅದಿ ಧನ್ಯವಾದಗಳನ್ನು ಅರ್ಪಿಸಿದರು.
No comments
Post a Comment