ರಾಮಮಂದಿರ ಕಾಮಗಾರಿಯನ್ನು ಕಾಂಗ್ರೆಸ್ ಪೂರ್ಣಗೊಳಿಸಲಿದೆ : ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್

No comments

ರಾಜ್ಯ ಸುದ್ದಿ : 2024ರವರೆಗೂ ರಾಮ ಮಂದಿರ ಕಾಮಗಾರಿ ಮುಗಿಯದಿದ್ದರೆ 2024ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ್ ಘೋಷಿಸಿದರು.

 ರಾಮ ಮಂದಿರವನ್ನು ಕಾಂಗ್ರೆಸ್ ಸರ್ಕಾರ ಏಕೆ ಪೂರ್ಣಗೊಳಿಸಬಾರದು? ನಾನು ಮಂದಿರ ನಿರ್ಮಾಣಕ್ಕೆ ₹10 ಸಾವಿರ ದೇಣಿಗೆ ನೀಡಿದ್ದೇನೆ. ಏಕೆಂದರೆ ಶ್ರೀರಾಮ ಬಿಜೆಪಿಗೆ ಸೇರಿದ ವ್ಯಕ್ತಿ ಅಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಸಾವಿರಾರು ಕೋಟಿ ಸಂಗ್ರಹಿಸಲಾಗಿದೆ. ಆ ಹಣ ಎಲ್ಲೋಯ್ತು, ಯಾರಾದ್ರೂ ಲೆಕ್ಕ ಕೊಡ್ತಾರಾ? ಎಂದು ಸಹ ಅವರು ಇಂದು ಪ್ರಶ್ನಿಸಿದ್ದಾರೆ.

No comments

Post a Comment