ಶನಿವಾರಸಂತೆ : ಶ್ರೀಗಂಧದ ಮರ ಕಳ್ಳ ಸಾಗಾಣಿಕೆಗೆ ಯತ್ನ - 3 ಮಂದಿ ಬಂಧನ

No comments

ಶನಿವಾರಸಂತೆ : ಸಮೀಪದ ಮಾಲಂಬಿ ಕಣಿವೆಬಸವನಳಹಳ್ಳಿ  ಗ್ರಾಮದ ಸಂಜೀವ ಎಂಬುವವರಿಗೆ ಸೇರಿದ ತೋಟದಿಂದ 2 ಶ್ರೀಗಂಧದ ಮರಗಳನ್ನು ಕಡಿದು ಮಾರುತಿ 800 ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ನಾಲ್ವರನ್ನು ಉಪವಲಯ ಅರಣ್ಯಾಧಿಕರಿಗಳ ನೇತೃತ್ವದ ತಂಡ ಬಂಧಿಸಿದೆ. ಕೃತಿಗುರು, ಶಶಿಕುಮಾರ್ , ಸಂಜು, ಬಂಧಿತರು.  7 ಶ್ರೀಗಂಧ ಮರದ ತುಂಡುಗಳು ಹಾಗೂ ಸಾಗಾಣಿಕೆಗೆ  ಬಳಸಿದ್ದ ಮಾರುತಿ 800 ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಸದ್ರಿ ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಸೂರ್ಯ ಎಂ.ಜೆ ಹಾಗೂ ಅರಣ್ಯ ರಕ್ಷಕರಾದ ಶ್ರೀ ವೆಂಕಟೇಶ್ ಶಂಕರಗೌಡ ಕುಲಕರ್ಣಿ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

No comments

Post a Comment