ವಿರಾಜಪೇಟೆಯಲ್ಲಿ ಎಸ್ ವೈ ಎಸ್ ರಬೀಹ್ ಅಭಿಯಾನ ಸಮ್ಮೇಳನ.
ವಿರಾಜಪೇಟೆ :ವಿಶ್ವ ಪ್ರವಾದಿ ಮಹಮದ್ ಪೈಗಂಬರವರ ಜೀವನ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವುದರ ಮೂಲಕ ಸತ್ಯ ಸ್ನೇಹ ಸದ್ವಿಚಾರದೊಂದಿಗೆ ಮುನ್ನಡೆಯಬೇಕೆಂದು ಗಣ್ಯರು ಕರೆ ನೀಡಿದರು.ಎಸ್ ವೈ ಎಸ್ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಪುಣ್ಯ ಪ್ರವಾದಿ ಸತ್ಯ, ಸ್ನೇಹ, ಸದ್ವಿಚಾರದ ರಬೀಹ್ ಅಭಿಯಾನದ ಉದ್ಘಾಟನಾ ಸಮ್ಮೇಳನ ವಿರಾಜಪೇಟೆ ಮದರಸ ಸಭಾಂಗಣದಲ್ಲಿ ನಡೆಯಿತು.ಕೊಡಗು ಜಿಲ್ಲಾ ಉಪ ಖಾಝಿ ಎಂ. ಎಂ ಅಬ್ದುಲ್ಲ ಪೈಝಿ ಪ್ರಾರ್ಥನೆ ನೆರವೇರಿಸಿದರು.ಎಸ್ ವೈಎಸ್ ಜಿಲ್ಲಾ ಅಧ್ಯಕ್ಷ ಸಿಪಿಎಂ ಬಸೀರ್ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವಕ್ಕೆ ಶಾಂತಿ ಸಹಬಾಳ್ವೆ ಸಹೋದರತ್ವ ಸಾರಿದ ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರವರ ಜೀವನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಈ ಅಭಿಯಾನ ಸಮ್ಮೇಳನ ನಡೆಯುತ್ತಿದ್ದು ಇದರ ಉದ್ಘಾಟನೆ ಕಾರ್ಯವನ್ನು ಮಾಡಲಾಗಿದೆ.ಎಂದರು.ಎಸ್ ವೈಎಸ್ ಸಂಘಟನೆಯ ಸಂಚಾಲಕ ಅಶ್ರಫ್ ಫೈಝಿ ಮಾತನಾಡಿ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಸ್ ವೈಎಸ್ ಸಂಘಟನೆ ಶಿಕ್ಷಣ, ಆರೋಗ್ಯ ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ.ಪ್ರವಾಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಮಿಲಾ ರಕ್ಷಣಾ ತಂಡವನ್ನು ರಚಿಸಲಾಗಿದ್ದು.ಕಳೆದ 2ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದೆ.ಸಿದ್ದಾಪುರದಲ್ಲಿರುವ ವರಕ್ಕಲ್ ಮುಲ್ಲಕೋಯ ತಂಙಳ್ ಸ್ಮಾರಕ ಭವನದ ಮೇಲಂತಸ್ತಿನ ನಿರ್ಮಾಣ ಕಾರ್ಯಕ್ಕೆ ದಾನಿಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು.ಮರ್ಹೂಂ ಅಲ್ ಹಾಜ್ ಪೂಕಳಂ ಅಬ್ದುಲ್ಲಾ ಮುಸ್ಲಿಯಾರ್ ರವರ ಅನುಸ್ಮರಣೆ ನಡೆಯಿತು. ಸಂದರ್ಭ ಆಬಿದ್ ಹುದವಿ ತಚ್ಚಣ್ಣ ,ಎ. ಸಿ ಉಸ್ಮಾನ್ ಫೈಝಿ, ವೈ. ಎಂ ಉಮ್ಮರ್ ಫೈಝಿ, ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್,ಕೆ. ಪಿ ಅಬೂಬಕ್ಕರ್ ಮುಸ್ಲಿಯಾರ್,ನೌಶಾದ್ ಬೆಂಗಳೂರು , ವಿರಾಜಪೇಟೆ ಖತೀಬ್ ರವೂಫ್ ಹುದವಿ,ಸಿದ್ದಾಪುರ ಖತೀಬ್ ನೌಫಲ್ ಹುದವಿ,ಸಿದ್ದಾಪುರ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ರವೂಫ್ ಹಾಜಿ,ಪ್ರಮುಖರಾದ ಬಶೀರ್ ಹಾಜಿ,ಅಬ್ದುಲ್ ರಝಾಕ್ ಹಾಜಿ,ಸಿ.ಎಚ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
No comments
Post a Comment