ಜಮಾಅತ್ ಅಧ್ಯಕ್ಷರಾದ ಪಿ.ಯಂ ಅಬ್ದುಲ್ಲಾ ಹಾಜಿ ಅವರು ಧ್ವಜಾರೋಹಣ ಮಾಡಿದರು. ಹಾಕತ್ತೂರು ಮಸೀದಿ ಖತೀಬರು ಪ್ರವಾದಿ ಸಂದೇಶವನ್ನು ಸಾರಿದರು. ನಮ್ಮ ಹಾಕತ್ತೂರು ವಾಟ್ಸಾಪ್ ತಂಡದ ಸಹಯೋಗದಲ್ಲಿ ಮದರಸ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಮುಖಿ ಕಾರ್ಯದ ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸ್ಥಳೀಯ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರವಾದಿ ಸಂದೇಶವನ್ನು ಸಾರುವ ಹಲವು ಕಾರ್ಯಕ್ರಮಗಳು ನಡೆಯಿತು. ಬಳಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಜಮಾಅತ್ ಉಪಾಧ್ಯಕ್ಷರಾದ ಕಾಸಿಂ ಕಾರ್ಯದರ್ಶಿ ಖಾದರ್ ಹಸೈನಾರ್ ಖಜಾಂಜಿ ಉಮ್ಮರ್ ಹಾಗೂ ಸಮಿತಿ ಸದಸ್ಯರಾದ ಹಂಸ, ಹಸೈನಾರ್, ಹಾರಿಸ್, ಇಬ್ರಾಹಿಂ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
No comments
Post a Comment