ನಾಪೋಕ್ಲುವಿನಲ್ಲಿ ಪೋಷಣ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹ

No comments

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಪೋಷಣ ಮಾಸಾಚರಣೆ ಮತ್ತು ಮಾತೃವಂದನಾ ಕಾರ್ಯಕ್ರಮವನ್ನು ನಾಪೋಕ್ಲು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 ಕಾರ್ಯಕ್ರಮಕ್ಕೆ ಆಗಮಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅರುಂಧತಿ ಯವರು ಮಾತನಾಡಿ ಗರ್ಭಿಣಿಯರು ಸ್ಥಳೀಯವಾಗಿಯೇ ಸಿಗುವಂತಹ ಪೌಷ್ಟಿಕಾಂಶಯುಕ್ತ ಆಹಾರವನ್ನು ಬಳಸಿ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಂಡು ಶಿಶುವಿನ ಬೆಳವಣಿಗೆಯನ್ನು ಮಾಡಬಹುದಾಗಿದೆ. ಅದರಂತೆ ನಮ್ಮ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸ್ಥಳೀಯ ಅಂಗನವಾಡಿ ಕೇಂದ್ರಗಳಿಂದ ಪಡೆದುಕೊಳ್ಳುವಂತೆ ಸೂಚಿಸಿದರು.


ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶೀಲಾ ರವರು ಮಾತನಾಡಿ ಮಾತೃ ವಂದನಾ ಯೋಜನೇಗೆ ಮೊದಲು ಗರ್ಭಿಣಿಯರು ಅರ್ಹ ಫಲಾನುಭಾವಿಗಳಾಗಿದ್ದು ಇವರಿಗೆ ಇಲಾಖೆಯಿಂದ ಮೂರು ಕಂತುಗಳಲ್ಲಿ 5 ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ನೇರ ಜಮೆಮಾಡಲಾಗುವುದು ಇದಕ್ಕೆ ಬೇಕಾದ ದಾಖಲಾತಿಯನ್ನು ಆಯಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ  ತಲುಪಿಸುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಅವರು ಮಾತನಾಡಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಎಚ್.ಎಸ್.ಪಾರ್ವತಿ ವಹಿಸಿದ್ದರು, ವೇದಿಕೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೊಹಮ್ಮದ್ ಖುರೇಶಿ,ಗ್ರಾಮ ಪಂಚಾಯಿತಿ ಸದಸ್ಯರುಗಳು,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಆಶಲತಾ ಸ್ವಾಗತಿಸಿ ಪವಿತ್ರಾ  ವಂದಿಸಿದರು.

No comments

Post a Comment