ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg): ಪಟ್ಟಣದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಅಂಗಡಿಯನ್ನಿಟ್ಟುಕೊಂಡು ಜಿಲ್ಲೆಯ ಎಲ್ಲಾ ದಿನಪತ್ರಿಕೆಯ ವಿತರಕರಾಗಿದ್ದ ಬಿ.ಎಸ್. ಹರೀಶ್ ಪೂಜಾರಿ (36) ತಾ,1ರಂದು ಬೆಳಗ್ಗಿನ ಜಾವ ತನ್ನ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾಪೋಕ್ಲುವಿನಲ್ಲಿ ಪತ್ರಿಕಾ ವಿತರಕರಾಗಿ ದುಡಿಯುತ್ತಿದ್ದ ಇವರು ಬುಧವಾರ ಬೆಳಿಗ್ಗೆ 7 ಗಂಟೆಗೆಯ ಸಮಯದಲ್ಲಿ ಎಂದಿನಂತೆ ನಗರಕ್ಕೆ ಬಂದು ಕೆಲವು ಅಂಗಡಿಗಳಿಗೆ ಪತ್ರಿಕೆಯನ್ನು ವಿತರಿಸಿ ನಂತರ ತನ್ನ ಅಂಗಡಿಗೆ ಬಂದು ಅಂಗಡಿಯ ಮೇಲ್ಚಾವಣಿಗೆ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಮಂಗಳವಾರದಂದು ತನ್ನ ಮಗನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮೃತರಿಗೆ ತಾಯಿ, ಸಹೋದರ,ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ನಾಪೋಕ್ಲುವಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಸಂತಾಪ: ಮೃತರ ಗೌರವಾರ್ಥ ನಾಪೋಕ್ಲು ಪಟ್ಟಣದ ಎಲ್ಲಾ ಅಂಗಡಿಯ ವರ್ತಕರು ಮದ್ಯಾಹ್ನ ತಮ್ಮ ಅಂಗಡಿಗಳನ್ನು ಮುಚ್ಚಿ ಸಂತಾಪ ಸೂಚಿಸಿದರು
No comments
Post a Comment