ಭಾರೀ ವಾಹನಗಳ ಸಂಚಾರ ನಿಷೇಧ : ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಮತ್ತು ಮಡಿಕೇರಿಯಿಂದ ಸಂಪಾಜೆ ಮಾರ್ಗದಲ್ಲಿ ಮಾತ್ರ ಅನ್ವಯ

No comments

ಮಡಿಕೇರಿ ಸೆ.04(web@timesofcoorg):-ಕೊಡಗು ಜಿಲ್ಲೆಯಾದ್ಯಂತ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು,  ವಾಹನದ ನೋಂದಣಿ ತೂಕ 16.200 ಕೆ.ಜಿ ಗೂ ಅಧಿಕ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ  ಕೊಡಗು ಜಿಲ್ಲೆಯಾದ್ಯಂತ ವಿಧಿಸಲಾಗಿದ್ದ ನಿರ್ಬಂದವು ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಮತ್ತು ಮಡಿಕೇರಿಯಿಂದ ಸಂಪಾಜೆ  ಮಾರ್ಗದಲ್ಲಿ ಮಾತ್ರ ಭಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅನ್ವಯವಾಗಲಿದೆ. ಹಾಗೆಯೇ ಈ ಅನ್ವಯವು  ಸೆಪ್ಟೆಂಬರ್ 15 ವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.

No comments

Post a Comment