ಅನಾರೋಗ್ಯವಾಗಿ ಸಂಕಷ್ಟದಲ್ಲಿದ್ದ ಮಹಿಳೆಗೆ ನೆರವಾದ ನಾಪೋಕ್ಲು ಬೇತು ಶೌರ್ಯ ವಿಪತ್ತು ಘಟಕದ ಸದಸ್ಯರು

No comments

 

ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು (TOC ಪ್ರತಿನಿಧಿ) :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಪೋಕ್ಲು ಬೇತು ಶೌರ್ಯವಿಪತ್ತು ಘಟಕದ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದ  ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ವಾಸವಾಗಿರುವ ರತ್ನಾವತಿ ಎಂಬುವವರು ಎರಡು ದಿನಗಳಿಂದ ಅನಾರೋಗ್ಯವಾಗಿ ಮನೆಯಲ್ಲಿಯೇ ಇದ್ದರು ಇವರಿಗೆ ವಯಸ್ಸಾಗಿರೋದರಿಂದ ನಡೆಯಲು ಆಗದಂತಹ ಪರಿಸ್ಥಿತಿಯಲ್ಲಿ  ಆಸ್ಪತ್ರೆಗೆ ಹೋಗಲು ಆಗದೆ ಸಂಕಷ್ಟದಲ್ಲಿಇದ್ದರು.



ಇದನ್ನು ಅರಿತ ನಾಪೋಕ್ಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೇತು ಶೌರ್ಯ ವಿಪತ್ತು ಘಟಕದ ಸದಸ್ಯರು ಹಾಗೂ ನಾಪೋಕ್ಲು ಗ್ರಾಮಪಂಚಾಯತಿ ಸದಸ್ಯರೂ ಆದ ಕಾಳೆಯಂಡ ಸಾಬಾ ತಿಮ್ಮಯ್ಯನವರು ಕೂಡಲೇ ರತ್ನಾವತಿ ಎಂಬುವವರ ಮನೆಗೆ ಧಾವಿಸಿ ಇವರನ್ನು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪುನಃ ಅವರ ಮನೆಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

ಸಾಬಾ ತಿಮ್ಮಯ್ಯ ನವರ ಜೊತೆ ಸಹಾಯಕ್ಕೆ ವಿಪತ್ತು ಘಟಕದ ಸದಸ್ಯರಾದ ಮಿಥುನ್ ಮೇದಪ್ಪ, ದೀಪಕ್,ಇದ್ದರು.



No comments

Post a Comment