ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg) :ಸಮೀಪದ ಬೆತುಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಲ್ಲಿ ದ್ವಜಾರೋಹಣವನ್ನು ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯ ಕಾಳೆಯಂಡ ಸಾಬಾ ತಿಮ್ಮಯ್ಯ ನವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ಮಮತಾ, ಶಿಕ್ಷಕಿ ಸಾವಿತ್ರಿ,ನಾಪೋಕ್ಲು ಬೇತು ಶೌರ್ಯ ಘಟಕದ ಸಂಯೋಜಕಿ ದಿವ್ಯ ಬಾಳೆಯಡ , ಸದಸ್ಯರಾದ ಮಿಟ್ಟು ಸೋಮಯ್ಯ, ಅನಿಲ್, ಮಿಥುನ್, ದೇವಯ್ಯ, ಹರ್ಷಿತ್,ಗಿರಿಶ್ , ವಿಜು, ಅಂಗನವಾಡಿ ಕಾರ್ಯಕರ್ತೆ ಆಶಾ, ಸಹಾಯಕಿ ಲೀಲಾವತಿ, ದಮಯಂತಿ, ವೀಣಾ ಮತ್ತಿತರರು ಹಾಜರಿದ್ದರು.


No comments
Post a Comment