ಸೋಮವಾರಪೇಟೆ (web@timesofcoorg) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ಕಲ್ಕಂದೂರು ಯೂನಿಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಝಾದಿ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ಸೆಂಟರ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಶಾಖಾ ಉಪಾಧ್ಯಕ್ಷರಾದ ಅಕ್ಮಲುದ್ದೀನ್ ಸ್ವಾಗತ ಭಾಷಣ ನಿರ್ವಹಿಸಿದರು. ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ SSF ಕಲ್ಕಂದೂರು ಶಾಖೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ & ಚಿತ್ರ ರಚನೆ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು.
ಕರ್ನಾಟಕ ಮುಸ್ಲಿ ಜಮಾಅತ್ ಸೋಮವಾರಪೇಟೆ ಬ್ಲಾಕ್ ಕೋರ್ಡಿನೇಟರ್ ಸಮದ್ ನಿಝಾಮಿ, ಕಲ್ಕಂದೂರು ಮಸೀದಿ ಮುಅಲ್ಲಿ ಸೈಫುದ್ದೀನ್ ಮುಸ್ಲಿಯಾರ್, ಸೋಮವಾರಪೇಟೆ ಮಸೀದಿಯ ಸದರ್ ಮುಅಲ್ಲಿಂ ಮುನೀರ್ ಸಅದಿ, ಮುಅಲ್ಲಿ ಲತೀಫ್ ಮುಸ್ಲಿಯಾರ್. ಎಸ್ಸೆಸ್ಸೆಫ್ ಎಸ್ ವೈಎಸ್ ಕಾರ್ಯಕರ್ತರು, ಮಸೀದಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




No comments
Post a Comment