ಭಾರತದಿಂದ ಯುಎಇ ತೆರಳುವ ಪ್ರಯಾಣಿಕರಿಗೆ 10 ದಿನ ಕ್ವಾರಂಟೈನ್ ಕಡ್ಡಾಯ

1 comment

 


ಗಲ್ಫ್ ಸುದ್ದಿ :  ಭಾರತದಿಂದ ರಾಸ್ ಅಲ್ ಕೈಮಾ ಹಾಗೂ ಅಬುಧಾಬಿ  ತೆರಳುವ ಯುಎಇ ನಿವಾಸಿಗಳಿಗೆ 10ದಿನ ಕ್ವಾರಂಟೈನ್ ಕಡ್ಡಾಯಗೊಳಿಸಿ ಯುಎಇ ವಿಮಾನಯಾನ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. 

ದುಬೈ ಶಾರ್ಜಾ ಪ್ರಯಾಣಿಸುವವರಿಗೆ 10ದಿನದ ಕ್ವಾರಂಟೈನ್ ಅಗತ್ಯವಿಲ್ಲ. ಈ ಎರಡು ಸ್ಥಳಗಳಿಗೆ ತೆರಳಿದವರು PCR ಟೆಸ್ಟ್ ಮಾಡಿಸಿಕೊಳ್ಳಬೇಕು ಹಾಗೂ ನೆಗೆಟಿವ್ ವರದಿ ಬರುವವರೆಗೆ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ, ಪಾಕಿಸ್ತಾನ , ಶ್ರೀಲಂಕಾ, ನೈಜೀರಿಯಾ, ಉಗಾಂಡದಿಂದ ಯುಎಇ ತೆರಳುವ ಪ್ರಯಾಣಿಕರು 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಹಾಗೂ ಕ್ವಾರಂಟೈನ್ ನ 4ನೇ ಮತ್ತು 8ನೇ ದಿನದಲ್ಲಿ PCR ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ

1 comment

  1. Merkur 15c Safety Razor - Barber Pole - Deccasino
    Merkur 15C Safety Razor - deccasino Merkur - 15C for Barber หารายได้เสริม Pole is the perfect 출장안마 introduction to the novcasino Merkur Safety Razor.

    ReplyDelete