*ಕೋವಿಡ್ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಕಿಟ್ ವಿತರಣೆ ಮಾನವೀಯತೆ ಮೆರೆದ ಎನ್ ಸಿ ಟಿ ಮುಖ್ಯಸ್ಥ ಅಕ್ಕಳತಂಡ ಮೊಯ್ದು*

No comments
ಮಡಿಕೇರಿ  :ಮುಂಬೈನಲ್ಲಿ ನೆಲೆಸಿದ್ದರೂ ಕೊಡಗಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದ ಎನ್ ಸಿ ಟಿ   ಮುಖ್ಯಸ್ಥ ಅಕ್ಕಳತಂಡ  ಮೊಯ್ದು ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಕೋವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ಸಿಲ್ ಡೌನ್  ವ್ಯಾಪ್ತಿಯ ಕುಟುಂಬಗಳು,ಅನಾರೋಗ್ಯಕ್ಕೊಳಗಾಗಿರುವವರು,ವಿಶೇಷಚೇತನರು,ಬಡ, ಅನಾಥ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳು ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ವಿರಾಜಪೇಟೆಯಲ್ಲಿರುವ ಎನ್ ಸಿ ಟಿ ಟೂರ್ಸ್&ಟ್ರಾವೆಲ್ಸ್  ಸಂಸ್ಥೆಯ ಮೂಲಕ  ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು.ಸಂಕಷ್ಟದಲ್ಲಿರುವವರ ಆರೋಗ್ಯ ಸೇವೆಗೆ ಧನಸಹಾಯ, ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಪಠ್ಯಪುಸ್ತಕ ವಿತರಣೆ,ಕಡುಬಡ ಕುಟುಂಬಗಳಿಗೆ ನೆರವು,ಪ್ರವಾಹ ಪ್ರಕೃತಿ ವಿಕೋಪದಲ್ಲಿ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್  ವಿತರಣೆ ಸೇರಿದಂತೆ ಹಲವಾರು ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದು ಜಾತಿ ಮತ ಭೇದವಿಲ್ಲದೆ ಸೇವಾ ಮನೋಭಾವದಿಂದ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗುತ್ತಿದ್ದಾರೆ ಎಂದು ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ತಿಳಿಸಿದ್ದಾರೆ.
ಸಿದ್ದಾಪುರ,ಮಾಲ್ದಾರೆ, ನೆಲ್ಲಿಹುದಿಕೇರಿ,ಬಿಳುಗುಂದ, ಚೋಕಂಡಳ್ಳಿ  ವ್ಯಾಪ್ತಿಯ ಸುತ್ತಮುತ್ತಲ ಭಾಗದ  ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ತರಕಾರಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗಿದೆ.ಕೂಲಿ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.ವಿಶೇಷಚೇತನರು ಅನಾರೋಗ್ಯಕ್ಕೊಳಗಾದವರು ಮನೆಗಳಲ್ಲೇ ಉಳಿದುಕೊಂಡಿದ್ದು ಕೋವಿಡ್ ಲಾಕ್ ಡೌನ್   ಸಮಸ್ಯೆ ಎದುರಿಸುತ್ತಿದ್ದಾರೆ.ಜಿಲ್ಲಾಡಳಿತ ಸಂಕಷ್ಟದಲ್ಲಿರುವವರಿಗೆ ತಕ್ಷಣ ಅಗತ್ಯ ಕಿಟ್ ವಿತರಣೆ ಬೇಕೆಂದು ಒತ್ತಾಯಿಸಿದ್ದಾರೆ.ವಿವಿಧ ಗ್ರಾಮಗಳಲ್ಲಿ ಕಿಟ್ ವಿತರಣೆ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಲತಿ, ಮಹಮ್ಮದ್ ಅಲಿ,ಸಿದ್ದಾಪುರದ ಆಸ್ಕರ್, ನವಾಜ್ , ಮುನ್ನಾ,ರಶೀದ್, ಸೇರಿದಂತೆ ಮತ್ತಿತರರಿದ್ದರು.

No comments

Post a Comment