ಕಳೆದ 3 ವರ್ಷಗಳನ್ನು ಆರ್ಥಿಕ ಶೂನ್ಯ ವರ್ಷವೆಂದು ಘೋಷಿಸಿ :ಸರಿತಾ ಪೂಣಚ್ಚ ಒತ್ತಾಯ .
.ಮಡಿಕೇರಿ :ಕೊರೋನಾ ಮಹಾಮಾರಿಯಿಂದ2019,20,21ವರ್ಷಗಳ ಅವಧಿಯಲ್ಲಿ ದೇಶದ ಕೃಷಿ ವ್ಯಾಪಾರ , ಕೈಗಾರಿಕೆ ,ಆರ್ಥಿಕ ಸಂಸ್ಥೆಗಳ ಸ್ಥಿತಿಗತಿ ಮಟ್ಟವು ಪಾತಾಳಕ್ಕೆ ಕುಸಿದಿದೆ .ಕೇಂದ್ರ ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಸುಗ್ರೀವಾಜ್ಞೆ ಹೊರಡಿಸಿ ದೇಶದ ಅರ್ಥಿಕ ಸಮತೋಲನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಪತ್ರಿಕಾ ಪ್ರಕಟಣೆ ನೀಡಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ . ಈ ಮೂರು ವರ್ಷಗಳಲ್ಲಿ ಸಣ್ಣ , ಅತಿಸಣ್ಣ ,ಮಧ್ಯಮ ಗುಡಿ ಕೈಗಾರಿಕೆಗಳು ಅಷ್ಟ್ಟೇ ಅಲ್ಲದೇ ಸಹಕಾರ ,ಸಮೂಹ ಉದ್ಯಮಿ ಸಂಸ್ಥೆಗಳು ಆರ್ಥಿಕ ದಿವಾಳಿಗೆ ಬಂದಿದ್ದು ಆರ್ ಬಿ ಐ ಸಾಲಗಾರ ಫಲಾನುಭವಿಗಳಿಗೆ ಯಾವುದೇ ವಿನಾಯತಿ ನೀಡಿಲ್ಲ .ಆರು ತಿಂಗಳುಗಳ ಕಾಲ ಇ ಎಂ ಐ ಅನ್ನು ಮುಂದೂಡಬೇಕು ,ಈ ಮೂರು ವರ್ಷದ ಸಾಲಕ್ಕೆ ಯಾವುದೇ ಶುಲ್ಕವನ್ನಾಗಲಿ, ಬಡ್ಡಿಯನ್ನಾಗಲಿ ಆಕರಣೆ ಮಾಡಬಾರದು .ಇದರಿಂದ ಸಣ್ಣ ಕೈಗಾರಿಕಾ ವಲಯ ಚೇತರಿಸಿಕೊಳ್ಳಲು ಸಾಧ್ಯವೆಂದು ಸರಿತಾ ಹೇಳಿದ್ದಾರೆ ಪ್ರತಿ ತಿಂಗಳು ಇಎಂಐ ಕಂತನ್ನು ಕಟ್ಟದೆ ಇದ್ದಾಗ ಸಾಲಗಾರನ ಸಿಬಿಲ್ ರಿಪೋರ್ಟ್ ಮೌಲ್ಯ ಕುಸಿಯುತ್ತಾ ಹೋಗುತದ್ದೆ .ಅಲ್ಲದೆ ಈ ಇಎಂಐ ಕಾಲವಕಾಶದಲ್ಲಿ ಸಿಬಿಲ್ ಅರ್ಹತೆಗೆ ದಕ್ಕೆ ಆಗದಂತೆ ಆರ್ಥಿಕ ತಿದ್ದುಪಡಿ ತರಬೇಕೆಂದು ಸರಿತಾ ಒತ್ತಾಯಿಸಿದ್ದಾರೆ ಕಾರಣ ಹಣಕಾಸು,ಆದಾಯ ತೆರಿಗೆ ,ಯೋಜನಾ ಇಲಾಖೆಗಳ ಜೊತೆಗೆ ಆರ್ ಬಿ ಐ ಗೆ ಸೂಕ್ತ ನಿರ್ದೇಶನ ನೀಡಿ ಸಣ್ಣ ,ಅತಿಸಣ್ಣ ಗುಡಿ ಕೈಗಾರಿಕೆ ಮತ್ತು ಸಹಕಾರ ಸಮೂಹ ಸಂಸ್ಥೆಗಳ ಕೈಗಾರಿಕಾ ವಲಯದ ರಕ್ಷಣೆಗೆ ಮುಂದಾಗಬೇಕೆಂದು ಸರಿತಾ ಪೂಣಚ್ಚ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ .
No comments
Post a Comment