ಗುಯ್ಯ ಅಗಸ್ತೇಶ್ವರ ಸಹಕಾರ ಸಂಘದಿಂದ ಕೋವಿಡ್ ಸಂತ್ರಸ್ಥರಿಗೆ ಕಿಟ್ ವಿತರಣೆ.
ಸಿದ್ದಾಪುರ :ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೊಳಗಾಗಿ ಸೀಲ್ ಡೌನ್ ವ್ಯಾಪ್ತಿಯಲ್ಲಿರುವಸಂತ್ರಸ್ತ ಕುಟುಂಬಗಳಿಗೆ ವಿತರಿಸಲು ಸಿದ್ದಾಪುರ ಗುಯ್ಯ ಅಗಸ್ತೇಶ್ವರ ಸೇವಾ ಸಹಕಾರ ಸಂಘದ ವತಿಯಿಂದ ಕಿಟ್ ಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.ಗುಯ್ಯ ಅಗಸ್ತೇಶ್ವರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ. ಎಸ್ ವೆಂಕಟೇಶ್ ಪತ್ರಿಕೆಯೊಂದಿಗೆ ಮಾತನಾಡಿ ಸಿದ್ದಾಪುರ, ಕರಡಿಗೋಡು, ಗುಹ್ಯ ಗ್ರಾಮದ ವ್ಯಾಪ್ತಿಯಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕೋವಿಡ್ ನಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ತುರ್ತು ಸಂದರ್ಭಕ್ಕೆ ನೆರವಾಗಲು ಸಂಘ ಮುಂದಾಗಿದ್ದು30 ಸಾವಿರ ಮೌಲ್ಯದ 30 ಕಿಟ್ ಗಳನ್ನು ವಿತರಿಸಲು ಮುಂದಾಗಿದೆ.ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರ ನೀಡಲಾಗುವುದುಎಂದು ಹೇಳಿದ ಅವರು ಸಹಕಾರ ಸಂಘವು ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ ಎಂದರು.ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಸೇರಿದಂತೆ ಮತ್ತಿತರರು ಇದ್ದರು.
No comments
Post a Comment