12ನೇ ದಿನಕ್ಕೆ ಮುಂದುವರಿದ ಆದಿವಾಸಿಗಳ ಅಹೋರಾತ್ರಿ ಪ್ರತಿಭಟನೆ.
ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ. ಎಸ್ ಪೊನ್ನಣ್ಣ ಭೇಟಿ.
ಸಿದ್ದಾಪುರ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಗರಹೊಳೆ ಅರಣ್ಯ ಕಚೇರಿ ಮುಂದೆ ನಡೆಯುತ್ತಿರುವ ಆದಿವಾಸಿ ಸಂಘಟನೆಗಳ ಅಹೋರಾತ್ರಿ ಪ್ರತಿಭಟನೆ 12ನೇ ದಿನಕ್ಕೆ ಮುಂದುವರಿದಿದೆ.
ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ .ಎಸ್ ಪೊನ್ನಣ್ಣ ಆದಿವಾಸಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು
ತಲೆತಲಾಂತರಗಳಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳು
ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು
ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿದ ಅವರು. ಅಂದಿನ ಕಾಂಗ್ರೆಸ್ ಸರ್ಕಾರ ಆದಿವಾಸಿಗಳಿಗೆ ಅರಣ್ಯ ಮಸೂದೆ ಕಾಯಿದಯ ಮೂಲಕ ಹಕ್ಕುಗಳನ್ನ ನೀಡಿತ್ತು.
ಆದಿವಾಸಿಗಳಿಗೆ ಕೃಷಿ ಭೂಮಿಯೊಂದಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ನಿಯಮವಿದ್ದರೂ.ಇದುವರೆಗೂ ಆದಿವಾಸಿಗಳ ಹಾಡಿ ಅಭಿವೃದ್ಧಿ ಬಗ್ಗೆ ಗಮನ ಹರಿಸದೆ .ಎಲ್ಲಾ ರೀತಿಯಲ್ಲೂ ಕಡೆಗಣಿಸಲಾಗಿದೆ.
ಮೀಸಲು ಅರಣ್ಯ ಪ್ರದೇಶ ವಾಗಿರುವದನ್ನು ಇತ್ತೀಚೆಗೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ.
ಇದರಿಂದ ಆದಿವಾಸಿಗಳ ಹಾಡಿ ಅಭಿವದ್ಧಿ ಹಾಗೂ ಜೀವನ ನಡೆಸಲು ಕಷ್ಟಸಾಧ್ಯವಾಗಿದೆ.
ಹಾಡಿಯಲ್ಲಿ ಮನೆ ಕಟ್ಟಬೇಕಾದರೂ ಅನುಮತಿಗಾಗಿ ದೆಹಲಿ ವರೆಗೆ ಹೋಗಿ ಬರಬೇಕಾಗಿದೆ.
ರಾಜ್ಯ ಸರಕಾರ ಆದಿವಾಸಿಗಳ ಬೇಡಿಕೆಗಳಿಗೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಯಬೇಕಿದೆ.
ಆದಿವಾಸಿಗಳ ನಿಯೋಗ ದೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗುವುದಾಗಿ ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯ ಪೃಥ್ವಿ,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ನರೇನ್ ಕಾರ್ಯಪ್ಪ
ಸೇರಿದಂತೆ ಆದಿವಾಸಿ ಮುಖಂಡರುಗಳು ಹಾಜರಿದ್ದರು .
No comments
Post a Comment