ವಿರಾಜಪೇಟೆಯಲ್ಲಿ ಮಹಿಳಾ ದಿನಾಚರಣೆ. ಮಹಿಳಾ ಸಾಧಕರಿಗೆ ಸನ್ಮಾನ

No comments
ವಿರಾಜಪೇಟೆಯಲ್ಲಿ ಮಹಿಳಾ ದಿನಾಚರಣೆ.
ಮಹಿಳಾ ಸಾಧಕರಿಗೆ ಸನ್ಮಾನ.

 ವಿರಾಜಪೇಟೆ   :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಮಿತಿ ವತಿಯಿಂದ 
ಮಹಿಳಾ ದಿನಾಚರಣೆ ಆಚರಿಸಲಾಯಿತು.
ವಿರಾಜಪೇಟೆ ಕೂರ್ಗ್ ವ್ಯಾಲಿ ಶಾಲೆಯ ಸಭಾಂಗಣದಲ್ಲಿ  ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದು ಹೇಳಿದರು. 
 ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಮಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೆ.ಸಿ ಗೀತಾಂಜಲಿ ,ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ,ಕಾವೇರಿ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ .ಎಂ. ಆರ್ ಪೂವಮ್ಮ ,ಕ್ಷೇತ್ರ ಶಿಕ್ಷಣ ಅಧೀಕ್ಷಕರಾದ ಪಿ. ಜಿ ಪೊನ್ನಮ್ಮ,
ಅಂತಾರಾಷ್ಟ್ರೀಯ ಕ್ರೀಡಾಪಟು ಎಂ ಪಿ ಹೊನ್ನಮ್ಮ ,ಕೂರ್ಗ್ ವ್ಯಾಲಿ ಶಾಲೆಯ ಆಡಳಿತಾಧಿಕಾರಿ ಸುಮಾ ಚಿತ್ರಭಾನು,ಸ್ಥಳೀಯ ಸಮಿತಿಯ ಕಾರ್ಯದರ್ಶಿ  ನಳಿನಾಕ್ಷಿ, ಸಹ ಕಾರ್ಯದರ್ಶಿ ಬಿ.ಬಿ ಜಾಜಿ, ಮುಖ್ಯ ಶಿಕ್ಷಕ ಮಹದೇವಸ್ವಾಮಿ.
ನಾಟ್ಯ ಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ 
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾದಕರಿಗೆ  ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು  
ಈ ಸಂದರ್ಭ ಪ್ರಾಂಶುಪಾಲರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.

No comments

Post a Comment