ನೆಲ್ಯಹುದಿಕೇರಿಯಲ್ಲಿ ಎಸ್ ವೈ ಎಸ್ ಅಧ್ಯಯನ ಶಿಬಿರ .
ಸಿದ್ದಾಪುರ : ಸನ್ನಿ ಯುವಜನ ಸಂಘ ( ಎಸ್ ವೈಎಸ್ ) ಜಿಲ್ಲಾ ಸಮಿತಿ ವತಿಯಿಂದ ಏಕದಿನ ಅಧ್ಯಯನ ಶಿಬಿರ ನೆಲ್ಲಿಹುದಿಕೇರಿಯ ಶಾದಿಮಹಲ್ ಸಭಾಂಗಣದಲ್ಲಿ ಕೊವೀಡ್ ನಿಯಮ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಬಿರ ಕಾರ್ಯಕ್ರಮ
ಎಸ್ ವೈಎಸ್ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಸ್ಸಮದ್ ಪೂಕೋಟೂರ್ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಂತಿ ಸಹಬಾಳ್ವೆಯೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು
ಸುಂದರ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವ ಮೂಲಕ ಯುವ ಸಮೂಹವನ್ನು ಶಿಕ್ಷಣದೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಹೇಳಿದ ಅವರು. ಯುವಸಮೂಹ ದುಶ್ಚಟಗಳಿಗೆ ಬಲಿಯಾಗದೆ
ಎಸ್ ವೈಎಸ್ ರಾಜ್ಯ ಸಮಿತಿಯ ಪ್ರಮುಖ ಸಲಾಹುದ್ದೀನ್ ಫೈಝಿ ಮಾತನಾಡಿ ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವದರ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ.
ಸಮಾಜ ಸೇವೆಯೊಂದೊಗೆ ಪರಸ್ಪರ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದರು. ಎಸ್ ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಾತನಾಡಿ ಭಾರತ ಮುಸಲ್ಮಾನರ ಆಧ್ಯಾತ್ಮಿಕ ಸಂಘಟನೆಯಾದ ಸಮಸ್ತ ಉಲಮಾ ಒಕ್ಕೂಟದ ಅತ್ಯಂತ ಶ್ರೇಷ್ಠವಾದ ಸುನ್ನಿ ಯುವಜನ ಸಂಘ (ಎಸ್ ವೈಎಸ್) ಜಿಲ್ಲೆಯಲ್ಲಿ ಜಾತಿ ಮತ ಭೇದವಿಲ್ಲದೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಸಂಕಷ್ಟದಲ್ಲಿರುವ ಜನರ ಸೇವೆಗೆ ಸ್ಪಂದಿಸುತ್ತಿದೆ.ಒಳಿತಿನ ಸಂದೇಶದೊಂದಿಗೆ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಧಾರ್ಮಿಕ ಚಿಂತನೆಗಳೊಂದಿಗೆ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಏಕದಿನ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ನಾನಾ ಭಾಗಗಳಲ್ಲಿ ಶಿಬಿರಗಳನ್ನು ಆಯೋಜಿಸಿ
ಯಾವುದೇ ಸಂದರ್ಭದಲ್ಲೂ ಸಂಕಷ್ಟದಲ್ಲಿರುವ ಜನರ ಸೇವೆಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಯುವ ಸಮೂಹ ಮುಂದಾಗಬೇಕಾಗಿದೆ ಎಂದರು.
ಎಸ್ ವೈ ಎಸ್ ಜಿಲ್ಲಾ ಅಧ್ಯಕ್ಷ ಸಿ ಪಿ ಎಂ ಬಶೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಪ ಖಾಝಿ ಎಂ. ಎಂ ಅಬ್ದುಲ್ಲಾ ಫೈಝಿ,ಪ್ರಮುಖರಾದ ಎಂ ಅಬ್ದುಲ್ ರಹ್ಮಾನ್ ಮುಸ್ಲಿಯಾರ್,ಉಮ್ಮರ್ ಫೈಝಿ, ಆರಿಫ್ ಫೈಝಿ,ತಮ್ಲಿಕ್ ದಾರಿಮಿ , ಅಬೂಬಕ್ಕರ್ ಮುಸ್ಲಿಯಾರ್, ಸುಲೈಮಾನ್ ಹಾಜಿ, ಉಸ್ಮಾನ್ ಫೈಝಿ,ಮುಸ್ತಫಾ ಹಾಜಿ, ರವೂಫ್ ಹಾಜಿ,ನಾಣಿ ಹಾಜಿ,ಸೂಫಿ ದಾರಿಮಿ,ರಫೀಕ್ ಖಾಜಿ,
No comments
Post a Comment