ಸೋಮವಾರ ಕೊಡಗು ಬಂದ್ ಗೆ ನಿರ್ಧಾರ - ಬೆಂಬಲ ಘೋಷಿಸಿದ ಎಸ್ ಡಿ ಪಿ ಐ ಕೊಡಗು
ಮಡಿಕೇರಿ (Times Of Coorg ) : ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ದಿನಾಂಕ 28-09-2020 ರಾಜ್ಯ ವ್ಯಾಪಿ ಬಂದ್ ಗೆ ಕರೆ ನೀಡಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲೂ ಸೋಮವಾರ ಸಂಪೂರ್ಣ ಬಂದ್ ಮಾಡಲು ಜಿಲ್ಲೆಯ ರೈತ ಮತ್ತು ಕಾರ್ಮಿಕ ಸಂಘಟನೆಗಳು ನಿರ್ಧರಿಸಿದೆ.
ರೈತರ ಪರ ನಡೆಯುತ್ತಿರುವ ಈ ಬಂದ್ ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕೊಡಗು ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ಸೂಚಿಸಿ ,ಪಕ್ಷದ ಕಾರ್ಯಕರ್ತರು ರೈತ ಪರ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿರುವುದಾಗಿ ಎಸ್.ಡಿ.ಪಿ.ಐ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments
Post a Comment