*ಸಿದ್ಧಾಪುರ ಉಸ್ಮಾನ್ ಹಾಜಿ ಯವರ ನಿಧನ ಕೊಡಗು ಜನತೆಗೆ ತುಂಬಲಾರದ ನಷ್ಟ ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ*

No comments
ಸಿದ್ದಾಪುರ:
 36 ವರ್ಷಗಳ ಕಾಲ ಸಿದ್ಧಾಪುರ ಮುಸ್ಲಿಮ್ ಜಮಾಅತಿನ ಅಧ್ಯಕ್ಷರಾಗಿ ಕೊಡಗು ಜಿಲ್ಲಾ ಮದ್ರಸ ಆಡಳಿತ ಮಂಡಳಿಯ ಅಧ್ಯಕ್ಷರು,ಹಿರಿಯ ರಾಜಕಾರಣಿ, ಸಮಾಜ ಸೇವಕರು, ಧಾರ್ಮಿಕ ಸಾಮಾಜಿಕ ರಂಗದಲ್ಲಿ ಗುರ್ತಿಸಿಕೊಂಡ ಸೇವೆ ಸಲ್ಲಿಸುತ್ತಿದ್ದ  ಕಳತ್ತಿ ನಗತ್ ಉಸ್ಮಾನ್ ಹಾಜಿಯವರ ನಿಧನ ಕೊಡಗು ಜಿಲ್ಲೆಗೆ ವಿಶೇಷವಾಗಿ ಸಿದ್ಧಾಪುರ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲೆ - ಮಂಗಳೂರು ವಲಯ ಸಂಚಾಲಕರಾದ ಜ| ಅಬ್ದುಸ್ಸಲಾಮ್  ಶೋಕ ವ್ಯಕ್ತಪಡಿಸಿದ್ದಾರೆ.೮      ಸಿದ್ಧಾಪುರದ ರಾಜಕೀಯ ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ದಿವಂಗತರು, ವಿವಿಧ ಧಾರ್ಮಿಕ ವಿಭಾಗಗಳ ಮಧ್ಯೆ ಸೌಹಾರ್ದತೆಯ ಕೊಂಡಿಯಾಗಿದ್ದರು. ಬಡವರ ಬಂಧು ಎಂಬ ನೆಲೆಯಲ್ಲಿ ಗುರುತಿಸಲ್ಪಟ್ಟಿದ್ದ ಅವರು ಜನಪರ ಕೆಲಸಗಳಲ್ಲಿ ತುಂಬು ಕಾಳಜಿ ವಹಿಸುತ್ತಿದ್ದರು. ಕಳೆದೆರೆಡು ವರ್ಷಗಳ ಹಿಂದೆ ಸಿದ್ಧಾಪುರ ಪರಿಸರದಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ಜಮಾಅತೆ ಇಸ್ಲಾಮೀ ಹಿಂದ್ ನ ವತಿಯಿಂದ HRS ಮುಖಾಂತರ ನಡೆಸಲಾದ ಸಮಾಜ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿರುವುದರೊಂದಿಗೆ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ತನ್ನ ಮಹನೀಯ ಸಾನ್ನಿಧ್ಯವನ್ನು ವಹಿಸಿಕೊಂಡಿದ್ದರು. ಎಂದು ಅವರು ದಿವಂಗತರ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ನೆನಪಿಸಿಕೊಂಡರು. ಅವರ ನಿಧನಕ್ಕೆ ಜ. ಇ ಹಿಂದ್ ಕೊಡಗು ಜಿಲ್ಲಾ ಸಮಿತಿ ಸಂಚಾಲಕರಾದ  ಅಬ್ದುಲ್ ಗಫೂರ್ ಕಾರ್ಯದರ್ಶಿ  ಅಬ್ದುರ್ರಹ್ಮಾನ್ ಪಿ.ಕೆ, ಸ್ಥಾನೀಯ ಅಧ್ಯಕ್ಷ  ಉಮರ್ ಹಾಜಿ, ಸಿದ್ಧಾಪುರ ಕೊಡಗು ರಿಲೀಫ್ ಸೆಲ್ ಪ್ರಮುಖರಾದ  ಅಶ್ರಫ್ ಎಂ. ಕೆ. ಹಾಗೂ ಟಿ.ಎ. ಬಶೀರ್, ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಕೆ.ಟಿ. ಬಶೀರ್ ಸೇರಿದಂತೆ ಮತ್ತಿತರರು  ಸಂತಾಪ ವ್ಯಕ್ತಪಡಿಸಿದ್ದಾರೆ. ದಿವಂಗತರಿಗೆ ಅಲ್ಲಾಹನು ಮಗ್ಫಿರತ್ , ಮರ್ಹಮತ್ ನೀಡಿ ಅನುಗ್ರಹಿಸಲಿ ಮತ್ತು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೂ ಬಂಧುಗಳಿಗೂ ಅಲಾಹನು ದಯಪಾಲಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

No comments

Post a Comment