ಎಸ್ಸೆಸ್ಸೆಫ್ ಪಾಲಿಬೆಟ್ಟ ಸೆಕ್ಟರ್ ವತಿಯಿಂದ ಇನ್ತಿಬಾಹ್ ದಅವ ಕಾನ್ಫರೆನ್ಸ್ ಹಾಗೂ ಬೇಕಲ್ ಉಸ್ತಾದ್ ಅನುಸ್ಮರಣೆ

No comments

ಪಾಲಿಬೆಟ್ಟ (Times Of Coorg) : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಸೆಕ್ಟರ್ ಮಟ್ಟದಲ್ಲಿ ನಡೆಸಲು ಸೂಚಿಸಿದ್ದ ಇನ್ತಿಬಾಹ್ ದಅವ ಕಾನ್ಫರೆನ್ಸ್ ಹಾಗೂ ಇತ್ತೀಚೆಗೆ ನಮ್ಮಿಂದಗಲಿದ ತಾಜುಲ್ ಫುಖಹಾಃ ಬೇಕಲ್ ಉಸ್ತಾದ್ ರವರ ಅನುಸ್ಮರಣಾ ಕಾರ್ಯಕ್ರಮವು ಮಟ್ಟಂ ಯುನಿಟ್ ನಲ್ಲಿ ನಡೆಸಲಾಯಿತು.

ಹಯಾತುಲ್ ಇಸ್ಲಾಂ ಮದ್ರಸ ವಠಾರ ದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಅಶ್ಕರ್ ಝೈನಿ ವಹಿಸಿದರು. ಕಾರ್ಯದರ್ಶಿ ಜಾಬಿರ್ ಮಟ್ಟಂ ಸ್ವಾಗತ ಹಾಗೂ ಮಹಲ್ ಖತೀಬರಾದ ಮುಹಮ್ಮದ್ ಕುಂಞಿ ಸಖಾಫಿ ಉದ್ಘಾಟನಾ ಭಾಷಣ ಮಾಡಿದರು.

ಎಸ್ ಜೆ ಎಂ ಕೊಡಗು ಜಿಲ್ಲಾ ಅಧ್ಯಕ್ಷರಾದ ಮುಸ್ತಫ ಸಖಾಫಿ ತರಗತಿಗೆ ನೇತೃತ್ವ ನೀಡಿದರು. ಎಸ್ಸೆಸ್ಸೆಫ್  ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ಝುಬೈರ್ಅ ಸಅದಿ ಮಲ್ದಾರೆ ಅನುಸ್ಮರಣಾ ಭಾಷಣ ಮಾಡಿದರು.
 ಸೆಕ್ಟರ್ ಉಪಾಧ್ಯಕ್ಷರಾದ ನಿಜಾಮುದ್ದೀನ್ ವಂದಿಸಿದರು.
ಸಭೆಯಲ್ಲಿ ಎಸ್ ವೈ ಎಸ್ ಮಟ್ಟಂ ಬ್ರಾಂಚ್ ಅಧ್ಯಕ್ಷರಾದ ಜಲಾಲುದ್ದೀನ್ ಮುಸ್ಲಿಯಾರ್. ಮಟ್ಟಂ ಮಹಲ್ ಸಮಿತಿ ಅಧ್ಯಕ್ಷರಾದ ಹುಸೈನ್. ಎಸ್ಸೆಸ್ಸೆಫ್ ಮಟ್ಟಂ ಯುನಿಟ್ ಅಧ್ಯಕ್ಷರಾದ ರಫೀಕ್. ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಮುಬಶಿರ್. ಹಾಗೂ ಸೆಕ್ಟರ್ ವ್ಯಾಪ್ತಿಯ ಸುಮಾರು 40 ಕ್ಕಿಂತ ಹೆಚ್ಚು ಮುತ ಅಲ್ಲಿಂ ವಿದ್ಯಾರ್ಥಿಗಳು ಹಾಜರಿದ್ದರು.

No comments

Post a Comment