ಒಕ್ಕೂಟದ ಮಹಿಳೆಯರಿಗೆ ಟ್ರ್ಯಾಕ್ಟರ್ ವಿತರಣೆ

No comments
ವಿರಾಜಪೇಟೆ: ಮಹಿಳೆಯರು ಸಂಘಟನೆಗಳ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುದರೊಂದಿಗೆ  ಸ್ವಾವಲಂಬಿಗಳಾಗಿ ಅಭಿವೃದ್ಧಿಯೊಂದಿಗೆ ಮುನ್ನಡೆಯಬೇಕೆಂದು ಶಾಸಕ ಕೆ. ಜಿ ಬೋಪಯ್ಯ ಹೇಳಿದರು.ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ಆವರಣದಲ್ಲಿ  ಗ್ರಾಮಪಂಚಾಯತಿ ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ .ಕೇಂದ್ರ ಸರ್ಕಾರದ ಪುರಸ್ಕೃತ ಹಾಗೂ ರಾಜ್ಯ ಸರಕಾರದ ಕೃಷಿ ಯಾಂತ್ರೀಕರಣ ಉಪ ಯೋಜನೆ ಅಡಿಯಲ್ಲಿ  ಟ್ಯಾಕ್ಟರ್ ಮತ್ತು ವೀಡ್ಕಟ್ಟರ್  ವಿತರಿಸಿ ಮಾತನಾಡಿ  ಸರ್ಕಾರಗಳ ಸವಲತ್ತುಗಳನ್ನು ಪಡೆದುಕೊಂಡು  ಜೀವನದಲ್ಲಿ ಸಾಧಿಸುವ ಛಲದೊಂದಿಗೆ  ಮುನ್ನಡೆಯಬೇಕೆಂಬ ಉದ್ದೇಶದಿಂದ  ಉಚಿತವಾಗಿ ಟ್ಯಾಕ್ಟರ್ ನೀಡಲಾಗಿದೆ.ಮಹಿಳೆಯರು  ಸಂಘಟನೆಯೊಂದಿಗೆ ಮುಖ್ಯವಾಹಿನಿಗೆ ಬರಬೇಕೆಂದರು. ಈ ಸಂದರ್ಭ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಕೊಡಗು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ  ಶ್ರೀಕಂಠ ಮೂರ್ತಿ ,ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ರಾಜನ್,  ಪಂಚಾಯಿತಿ ಸದಸ್ಯರುಗಳಾದ ಬೋಪಣ್ಣ,ಸಹದ್ದೀರ್  ಅಲಿ, ಬಶೀರ್,ಸುನೀತಾ, ಕವಿತಾ,ಫಾತಿಮಾ,ಯಾಂಜಿ ವಿಟ್ಟ,   ಜೋಸೆಫ್, ಜಿಲ್ಲಾ ಪಂಚಾಯಿತಿ ಡಿಪಿಎಂ ಕುಮಾರ್ ಸೇರಿದಂತೆ ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು

No comments

Post a Comment