ಸಮಾಜ ಸೇವೆಯಲ್ಲಿ ನಿರತರಾಗಿರುವ ಮೂರ್ನಾಡಿನ ಮೈಮಾ ಸಂಘಟನೆ
ಸಿದ್ದಾಪುರ: ಮೂರ್ನಾಡು ಮೈಮಾ ಸಂಘಟನೆ ಉತ್ಸಾಹಿ ಯುವಕರನ್ನು ಒಳಗೊಂಡ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.50 ಕ್ಕೂ ಅಧಿಕ ಯುವಕರನ್ನು ಒಳಗೊಂಡಿರುವ ಮೈಮಾ ಸಂಘಟನೆಯ ಕಾರ್ಯಕರ್ತರು ಲಾಕ್ ಡೌನ್ ಸಮಯದಲ್ಲಿ ಸ್ವಯಂ ಸೇವಕರಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ. ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು, ತುರ್ತು ಸಂದರ್ಭಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವುದು, ಕೊರೋನಾ ಕಿಟ್ ವಿತರಣೆ, ಕೊರೋನಾದಿಂದ ಮೃತಪಟ್ಟವರ ದಫನ ಕಾರ್ಯ, ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ ಹಾಗೂ ಕಳೆದ ಎರಡು ವರ್ಷ ಕೊಡಗಿನಲ್ಲಿ ಪ್ರವಾಹ ಎದುರಾದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಮಾಡುವ ಮೂಲಕ ನಿರಂತರವಾಗಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮೈಮಾ ಸಂಘಟನೆಯ ವತಿಯಿಂದ ಮೂರ್ನಾಡು ಸುತ್ತಮುತ್ತಲಿನ ಕೊರೋನಾ ಸೇನಾನಿಗಳನ್ನು ಮತ್ತು ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಅವರನ್ನು ಅಭಿನಂದಿಸಿ ಗೌರವಿಸಿದರು. ಮೈಮಾ ಸಂಘಟನೆಯ ಸಮಾಜ ಸೇವೆಯ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಮೂರ್ನಾಡು ಸುತ್ತಮುತ್ತಲಿನಲ್ಲಿ ಎಲ್ಲಾ ರೀತಿಯ ಸಹಾಯಕ್ಕೂ ಮೈಮಾ ಸಂಘಟನೆಯ ಕಾರ್ಯಕರ್ತರು ಸಿದ್ದರಾಗಿದ್ದು ದಿನದ 24 ಗಂಟೆಗಳಲ್ಲೂ ಅಗತ್ಯ ಸಹಾಯಕ್ಕಾಗಿ ಸಂರ್ಕಿಸುವಂತೆ ಸಂಘಟನೆಯ ಕಾರ್ಯದರ್ಶಿ ನಿಚ್ಚು ತಿಳಿಸಿದ್ದಾರೆ.
No comments
Post a Comment