ನಾಪೋಕ್ಲು : ಧರ್ಮಸ್ಥಳ ಸಂಘದ ಸದಸ್ಯರಿಂದ ಶ್ರಮದಾನ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಇಲ್ಲಿಗೆ ಸಮೀಪದ ಸುಭಾಷ್ ನಗರ B ಬ್ಲಾಕ್ ಒಕ್ಕೂಟದ ಸದಸ್ಯರಿಂದ ನಾಪೋಕ್ಲುವಿನ ಗಣಪತಿ ದೇವಸ್ಥಾನದ ಸುತ್ತಮುತ್ತಲು ತುಂಬಿರುವ ಗಿಡಗಂಟಿಗಳನ್ನು ಸ್ವಚ್ಛತೆ ಮಾಡುವುದರ ಮೂಲಕ ಮೆರುಗನ್ನು ತುಂಬಿದರು. ಒಕ್ಕೂಟದ ಅಧ್ಯಕ್ಷರಾದ ಮುತ್ತುರಾಣಿ, ಉಪಾಧ್ಯಕ್ಷರಾದ ಸುಶೀಲಾ, ಸಂಘದ ಪ್ರತಿನಿಧಿಯಾದ ಉಮಾ ಲಕ್ಷ್ಮಿ, (ಮೀನ ) ಹಾಗೂ ಸಂಘದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.


No comments
Post a Comment