ಮೂರ್ನಾಡು ಮೂಲದ ರುಕ್ಮಣಿ ಎಂಬ ಮಹಿಳೆಯೊಬ್ಬರು ನಮ್ಮ ಕೊಡಗು ತಂಡದವರಿಗೆ ಕರೆ ಮಾಡಿ ಕುಶಾಲನಗರ ಸಮೀಪದ ಕೂಡಿಗೆಯಲ್ಲಿರುವ ನನ್ನ ಅಕ್ಕ ಭಾಗೀರಥಿ ಹಸಿವಿನಿಂದ ಸಂಕಷ್ಟದಲ್ಲಿದ್ದು ದಯವಿಟ್ಟು ಸ್ಪಂದಿಸಿಬೇಕೆಂದು ಕರೆ ಮಾಡಿದ್ದರು.ವಿಷಯ ತಿಳಿದ ನಮ್ಮ ಕೊಡಗು ತಂಡದ ಸ್ಥಾಪಕಾಧ್ಯಕ್ಷ ನೌಷಾದ್ ಜನ್ನತ್ತ್. ತಂಡದ ಗೌರವ ಅಧ್ಯಕ್ಷ ಎ. ಜೆ ಜಾನ್ಸನ್ ಅವರ ಮೂಲಕ ಬೆಂಗಳೂರಿನ ಬನವಾಸಿ ಕನ್ನಡಿಗರ ತಂಡ ನೀಡಿದ ಅಕ್ಕಿ ಹಾಗೂ ಆಹಾರ ಪದಾರ್ಥಗಳ ಕಿಟ್ ನ್ನು ಗ್ರಾಮದ ಸುರೇಶ್ ಎಂಬವರ ಸಹಕಾರದೊಂದಿಗೆ ಮಹಿಳೆಯ ಮನೆ ವಿಳಾಸ ಹುಡುಕಿ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಮ್ಮ ಕೊಡಗು ತಂಡದ ಸೇವಾ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ನಮ್ಮ ಕೊಡಗು ತಂಡ.
ಕುಶಾಲನಗರ : ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಬಗ್ಗೆ ಜಿಲ್ಲೆಯ ನಾನಾ ಭಾಗಗಳಲ್ಲಿಯೂ ಸೇವಾ ಮನೋಭಾವದಿಂದ ಇರುವವರನ್ನ ಗಮನಿಸಿ ನಮ್ಮ ನೆರವಿಗೆ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ನಂಬಿಕೆಯಿಂದ ಕರೆ ಮಾಡಿ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ನೆರವಾಗಬೇಕೆಂದು ಅಳಲು ತೋಡಿಕೊಂಡ ಮಹಿಳೆಯ ಮಾಹಿತಿಗೆ ತಕ್ಷಣ ಸ್ಪಂದಿಸಿ ವಿಳಾಸ ಹುಡುಕಿ ಮನೆ ಬಾಗಿಲಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ನೀಡಿ ಮಾನವೀಯತೆ ಮೆರೆದ ನಮ್ಮ ಕೊಡಗು ತಂಡದ ಸೇವೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
No comments
Post a Comment