ಅಂಬೇಡ್ಕರ್ ಸೇನೆ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಕೊಡೆ,ಮಾಸ್ಕ್ ,ಲೇಖನಿ ಸಾಮಗ್ರಿ ವಿತರಣೆ.

No comments
ಸಿದ್ದಾಪುರ : ಜಿಲ್ಲಾ ಅಂಬೇಡ್ಕರ್ ಸೇನೆ ಸಂಘಟನೆ ವತಿಯಿಂದ ಮಾಲ್ದಾರೆ ಶಾಲೆಯ  ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ  ಕೊಡೆ, ಮಾಸ್ಕ್,  ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ  ಅಂಬೇಡ್ಕರ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್  ಮಾತನಾಡಿ  ಸಂವಿಧಾನವನ್ನು ಗೌರವಿಸುವ ಮೂಲಕ  ಅಂಬೇಡ್ಕರ್ ರವರ ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ಹೇಳಿದರು. ಸಂಘಟನೆ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಂಕಷ್ಟದಲ್ಲಿರುವ ರೋಗಿಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್,ಉಪಾಧ್ಯಕ್ಷೆ ಪುಷ್ಪಾ,ಸದಸ್ಯ ಇಸ್ಮಾಯಿಲ್,ಮಾಜಿ ಸದಸ್ಯ  ಕರುಂಬಯ್ಯ,ಶಾಲಾ ಮುಖ್ಯಶಿಕ್ಷಕ ಶರೀಫ್ , ಸಹ ಶಿಕ್ಷಕ  ಸತ್ಯನಾರಾಯಣ, ಶಿಕ್ಷಕಿ ಈಶ್ವರಿ,ಚೆಂಡೆ ಕಲಾವಿದ ಶಾಜಿ, ಜನಪರ ಸಂಘದ ಅಧ್ಯಕ್ಷ ಆಂಟೋನಿ, ಅಂಬೇಡ್ಕರ್ ಸೇನೆಯ ಪ್ರಮುಖರಾದ ಪುಟ್ಟಸ್ವಾಮಿ,   ಬಾವಾ ಮಾಲ್ದಾರೆ, ಮಂಜು, ಗಣೇಶ್ಸಿ ದ್ದರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು          

No comments

Post a Comment