ಕ.ಸಾ.ಪ ಕೊಡ್ಲಿಪೇಟೆ ಹೋಬಳಿ ಸಮಿತಿಯಿಂದ ಗಾನ ಗಂಧರ್ವ ಎಸ್.ಪಿ.ಬಿ. ರಿಗೆ ಶ್ರದ್ಧಾಂಜಲಿ
ಕೊಡ್ಲಿಪೇಟೆ (Times Of Coorg) :ಕನ್ನಡ ಸಾಹಿತ್ಯ ಪರಿಷತ್ತು ಕೊಡ್ಲಿಪೇಟೆ ಹೋಬಳಿ ಸಮಿತಿ ಯಿಂದ ಅಗಲಿದ ಚೇತನ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಿಗೆ ಶ್ರದ್ಧಾಂಜಲಿ ಸಭೆಯನ್ನು ಕ.ಸಾ.ಪ.ಕಚೇರಿಯಲ್ಲಿ ಏರ್ಪಡಿಸಲಾಗಿತ್ತು .
ಕ.ಸಾ.ಪ.ಹೋಬಳಿ ಅದ್ಯಕ್ಷ ಅಬ್ದುಲ್ ರಬ್ಬ್
ರವರು ಮಾತನಾಡುತ್ತಾ
ಕನ್ನಡವೆಂದರೆ ಅಚ್ಚು ಮೆಚ್ಚು ಎಂದು ಸದಾ ಹೇಳುತ್ತಿದ್ದಂತಹ ಬೇರೆ ಬಾಷೆಯವರಾದರೂ ಸಹ
ಕನ್ನಡ ಬಾಷೆಯಲ್ಲಿ ಅತೀ ಹೆಚ್ಚು ಹಾಡಿರುವ ಎಸ್.ಪಿ.ಬಿ ರವರಿಗೆ ಶ್ರದ್ಧಾಂಜಲಿ ಅರ್ಪಿಸುವುದು ನಮ್ಮ ಕರ್ತವ್ಯ ವೆಂದು ಕ.ಸಾ.ಪ ವತಿಯಿಂದ ಈ ಸಭೆಯನ್ನು ಆಯೋಜಿಸಿದ್ದೇವೆ.
ಸಂಗಿತಾ ಸ್ವರ ಸಾಮ್ರಾಟರು
ಸ್ಪಷ್ಟವಾದ ಸ್ವರ ಮಾದುರ್ಯದಿಂದ ಕನ್ನಡ ನಾಡಿನ ಜನರ ನಾಡಿ ಮೀಡಿತದಲ್ಲಿ ಎಂದು ಜನಾನುರಾಗಿಯಾಗಿ ಉಳಿದಿದ್ದಾರೆ. ಇಂಥಹ ಮಹಾನ್ ಗಾನ ಗಂದರ್ವನ ಆಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ .
ಇವರ ಸ್ವರ ಹಲವು ನಟರುಗಳಿಗೆ ಅಸ್ತಿತ್ವ ತಂದುಕೊಟ್ಟಿದೆ
ಎಂಜಿಆರ್ ರಿಂದ ಹಿಡಿದು ಡಾ.ರಾಜ್ ಕುಮಾರ್ ಹಿಂದಿಯಲ್ಲಿ ಸಲ್ಮಾನ್ ಖಾನ್ ರಂಥಹ ವಿವಿಧ ಬಾಷೆಗಳ ಎಲ್ಲಾ ನಟರು ಸಹ ಇವರ ಹಾಡಿಗೆ ನಟಿಸಿದ್ದಾರೆ,
ಸಂಗೀತದಲ್ಲಿ ಒಂದೇ ರೂಪ ಎರಡು ಗುಣ ಹೊಂದಿದ್ದಂಥಹ ಮಹಾನ್ ಚೇತರನ್ನು ನಾವು ಕಳೆದುಕೊಂಡಿದ್ದೇವೆ.
ಎಸ್.ಪಿ.ಬಿ.ಯವರು ಐದು ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗಳಿಗೆ ಬಾಜನರಾಗಿದ್ದರೆಂದರು,
ಕ.ಸಾ.ಪ ಪ್ರಮುಖರಾದ ಭಗವಾನ್ ಗೌಡ ,
ಬಿ.ಕೆ.ಯತೀಶ್ , ಕವಿತಾ ಟೀಚರ್ , ನಾಗೇಶ್ ,
ರವರುಗಳುಸಂಗಿತ ಸರಸ್ವತಿಯ ಮಾನಸ ಪುತ್ರ ಸ್ವರ ಬಾಸ್ಕರ ವಿವಿಧ ಬಾಷೆಗಳಲ್ಲಿ ಹಾಡಿರುವ ಸಕಲಕಲಾ ವಲ್ಲಭ ಸಂಗೀತ ಲೋಕದ ಖ್ಯಾತ ಗಾಯಕನ ಹಾಡಿ ಹೋಗಳಿ ಅವರ ಅಗಲಿಕೆಗೆ ಕಂಬನಿ ಮೀಡಿದು ಮಾತನಾಡಿದರು,
ಆರಂಭದಲ್ಲಿ ಎಲ್ಲರೂ ಒಂದು ನಿಮಿಷ ಮೌನಾಚರಿಸುವ ಮೂಲಕ ಆಗಲಿದ ಮಹಾ ಗಾಯಕನ ಅತ್ಮಕ್ಕೆ ಶಾಂತಿ ಕೋರಿದರು,
ಗ್ರಾ.ಪಂ.ಮಾಜಿ ಅದ್ಯಕ್ಷ ಔರಂಗ್‌ಜೇಬ್ ,
ಕ.ಸಾ.ಪ ಪದಾದಿಕಾರಿಗಳಾದ
ಯು.ಡಿ.ಮಂಜುನಾಥ್ ,ನೆಲ್ಸನ್ ಪ್ರೆಡ್ಡಿ ,ಕಾಂತರಾಜು , ನೂರ್ ಭಾನು , ವಿರೂಪಾಕ್ಷ ,
ಆಶಾ ಕಾರ್ಯಕರ್ತೆಯರಾದ ಕಲಾವತಿ ಹಾಗೂ ಯಶೋದಾ ಹಾಜರಿದ್ದರು ,
ಕ.ಸಾ.ಪ ಕೋಶಾದಿಕಾರಿ ಶಾಂತಕುಮಾರ್ ಸ್ವಾಗತಿಸಿ ವಂದಿಸಿದರು.

No comments
Post a Comment