ಫ್ರೆಂಡ್ಸ್ ಹರದ್ ಆಯೋಜಿಸಿದ ಹರದ್ ಪ್ರೀಮಿಯರ್ ಲೀಗ್ ಟಿ10 ಕ್ರೀಡಾಕೂಟದಲ್ಲಿ ಫ್ರೆಂಡ್ಸ್ ಹರದ್ ಚಾಂಪಿಯನ್
ಹರದ್ (Times Of Coorg / ಗಲ್ಫ್ ನ್ಯೂಸ್) : ಫ್ರೆಂಡ್ಸ್ ಹರದ್ ಆಯೋಜಿಸಿದ ಕ್ರೀಡಾಕೂಟದಲ್ಲಿ ಫ್ರೆಂಡ್ಸ್ ಹರದ್ ಚಾಂಪಿಯನ್ ಆಗಿ ಚೊಚ್ಚಲ ಪ್ರಶಸ್ತಿಯನ್ನು ಮಡಿಗೇರಿಸಿತು. ಸೌದಿ ಅರೇಬಿಯಾದ ಹರದ್ ಎಂಬ ಮರಳುನಾಡಿನಲ್ಲಿ ಸುಮಾರು ನಾಲ್ಕು ತಿಂಗಳುಗಳಿಂದ ಮೂರು ತಂಡವನ್ನು ಒಟ್ಟು ಸೇರಿಸಿ ಧಣಿದ ಮನಸ್ಸಿಗೆ ಸ್ವಲ್ಪ ಆಶ್ವಾಸನೆ ನೀಡಲು ಕ್ರಿಕೇಟ್ ಆಟವನ್ನು ಪ್ರಾರಂಬಿಸಲಾಯಿತು. ವಾರಕ್ಕೊಮ್ಮೆ ಮೂರು ತಂಡಗಳ ನಡುವೆ ಸೆಣಸಾಟ ನಡೆಯುತ್ತಿತ್ತು. ಇದನ್ನು ಸ್ವಲ್ಪ ಮನರಂಜನೆ ಮಾಡಬೇಕೆಂಬ ನಿಟ್ಟಿನಲ್ಲಿ ಫ್ರೆಂಡ್ಸ್ ಹರದ್ ಇದರ ಅಂಗಗಳಾದ ಸೈಫ್ ಹಾಗೂ ಜಲೀಲ್ ಕಾಟಿಪಳ್ಳ ಇಬ್ಬರಿಬ್ಬರು ಸೇರಿ ಹರದ್ ಪ್ರೀಮಿಯರ್ ಲೀಗ್ ಆಯೋಜಿಸಿದರು.
ಮೂರು ವಾರಗಳಿಂದ ಮೂರು ತಂಡಗಳ ನಡುವೆ 10 ಓವರಿನ ಪಂದ್ಯಗಳಲ್ಲಿ ಕೆ.ಸಿ.ಸಿ ಫ್ರೆಂಡ್ಸ್, ಎ ಎಂ ಇ ಸ್ಟೈಕರ್ಸ್ ಹರದ್ ಮತ್ತು ಫ್ರೆಂಡ್ಸ್ ಹರದ್ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡವು.
ನಿನ್ನೆ ನಡೆದ ಪ್ರಶಸ್ತಿ ಸುತ್ತಿನಲ್ಲಿ ಫ್ರೆಂಡ್ಸ್ ಹರದ್ ಹಾಗೂ ಎ ಎಂ ಇ ಸ್ಟ್ರೆಕರ್ಸ್ ಸೆಣಸಾಡಿದವು. ಟಾಸ್ ಗೆದ್ದುಕೊಂಡ ಎಂ ಎಂ ಇ ಕಪ್ತಾನ ಅಬ್ರಾರ್ ಫ್ರೆಂಡ್ಸ್ ಹರದ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಸೈಫ್ ಯು ಎಫ್ ಸಿ ಅವರ ಉತ್ತಮವಾದ ಬ್ಯಾಟಿಂಗ್ ಮೂಲಕ ಉತ್ತಮ ಮೊತ್ತ ಕಲೆ ಹಾಕಿತು. ಇದನ್ನು ಬೆನ್ನತ್ತಿದ ಎಂ ಎ ಇ ಆರಂಭಿಕ ಆಘಾತ ಎದುರಾಗಿ ಉತ್ತಮ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡಿತು.
ಕ್ರಿಡಾಕೂಟದುದ್ದಕ್ಕೂ ಉತ್ತಮ ಸ್ಕೊರ್ ಗಳಿಸಿದ ಮೊರ್ತಜ (ಫ್ರೆಂಡ್ಸ್ ಹರದ್) ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾದರೂ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಸತ್ಯ (ಎಂ ಎಂ ಇ) ಸವ್ಯಸಾಚಿ ಆಟಗಾರನಾದರೆ, ಕ್ರಿಡಾಕೂಟದ ಉತ್ತಮ ಎಸೆತಗಾರಿಕನಾಗಿ ಸದ್ದಾಮ್ ಯುನೈಟೆಡ್ ಆಯ್ಕೆಯಾದರು.
ಪ್ರಶಸ್ತಿ ಸುತ್ತಿನಲ್ಲಿ ಬ್ಯಾಟಿಂಗ್ ನಲ್ಲಿ ಅರ್ಧ ಶತಕ ಭಾರಿಸಿದ ಸೈಫ್ ಯು ಎಫ್ ಸಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಅರ್ಹರಾದರು.
ರೋಗಿಗಳ ಪಾಲಿನ ಆಶಾಕಿರಣವಾದ ಬ್ಲಡ್ ಡೊನರ್ಸ್ ಮಂಗಳೂರು ® ಸಂಸ್ಥೆಯ ಲೋಗೊವನ್ನು ಬ್ಯಾನರ್ ನಲ್ಲಿ ಅಳವಡಿಸಿ ರಕ್ತದಾನ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಕ್ರಿಡಾಕೂಟದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಜಾವಿದ್ ಶೈನ್ ಹಾಗೂ ಅತಿಥಿಗಳಾಗಿ ಫಾಝಿಲ್ ತಡಂಬೈಲ್, ಸಂತೋಷ್ ಕೆ.ಸಿ.ಸಿ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಸೈಫ್, ಅಝ್ಮಲ್, ಶಾಹಿದ್ ಅನ್ವರ್, ಜಲೀಲ್ ಕಾಟಿಪಳ್ಳ, ಇರ್ಷಾದ್ ಗುರುಪುರ, ಆಶಿಕ್ ಉಳ್ಳಾಲ್ ಉಪಸ್ಥಿತರಿದ್ದರು. ಹಫೀಝ್ ಇಸ್ಮಾಯಿಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವರದಿ - ಹರದ್ ಅಪ್ಡೇಟ್ಸ್






No comments
Post a Comment