ಅಕ್ರಮ ಗಾಂಜಾ ಸಾಗಾಟ : ಇಬ್ಬರನ್ನು ಬಂಧಿಸಿದ ವಿರಾಜಪೇಟೆ ಉಪ ವಿಭಾಗ ಪೋಲಿಸರು

No comments

ವಿರಾಜಪೇಟೆ (Times Of Coorg) : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿರಾಜಪೇಟೆ ಉಪ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ದಿನಾಂಕ 16-09-2020 ರಂದು ದೊರೆತ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪ ಠಾಣಾ ಸರಹದ್ದಿನ ತಿತಿಮತಿ ಗ್ರಾಮದಲ್ಲಿ  ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ    ಮಾರುತಿ ವ್ಯಾನಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ದಾಳಿ ನಡೆಸಿದ ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸಿ.ಟಿ ಜಯಕುಮಾರ್ ನೇತೃತ್ವದ ತಂಡ ಆರೋಪಿಗಳಾದ ಹೆಚ್.ಸಿ. ಸತೀಶ್ ಮತ್ತು ಪಂಜರಿ ಎರವರ ಶಿವು ಎಂಬವರನ್ನು ಮಾಲು ಸಮೇತ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

      ಕಾರ್ಯಾಚರಣೆಯಲ್ಲಿ ಸಿಪಿಐ ಎನ್.ಎನ್.ರಾಮರೆಡ್ಡಿ, ಪಿಎಸ್ಐ ಡಿ.ಕುಮಾರ್, ಎಎಸ್ಐ ಎಂ.ಎಸ್. ಸುಬ್ರಮಣಿ, ಸಿಬ್ಬಂದಿಗಳಾದ ಕೃಷ್ಣ, ಬಿ.ಎಂ.ರಾಮಪ್ಪ, ಎಂ.ಡಿ.ಮನು ಹಾಗೂ ಚಂದ್ರಶೇಖರ ರವರು ಭಾಗಿ ಯಾಗಿದ್ದರು. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿದೆ.

No comments

Post a Comment