ಹೇಮಾವತಿ ರೋಟರಿ ಸಂಸ್ಥೆ ಕೊಡ್ಲಿಪೇಟೆ ವತಿಯಿಂದ ಪ್ರತಿಭಾ ಪುರಸ್ಕಾರ
ಕೊಡ್ಲಿಪೇಟೆ (Times Of Coorg) : ಹೇಮಾವತಿ ರೋಟರಿ ಸಂಸ್ಥೆ ಕೊಡ್ಲಿಪೇಟೆ ವತಿಯಿಂದ ಪ್ರತಿಭಾನ್ವಿತರನ್ನು ಪುರಸ್ಕರಿಸಿ ಪ್ರತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸ್ಥಳೀಯ ಮಹಿಳಾ ಸಮಾಜದಲ್ಲಿ ಏರ್ಪಡಿಸಲಾಗಿತ್ತು ,
ಮುಖ್ಯ ಅಥಿತಿಗಳಾಗಿದ್ದ ಪ್ರಖ್ಯಾತ ವ್ಯೆದ್ಯರಾದ ಡಾ .ಉದಯ್ ಕುಮಾರ್ ಮಾತನಾಡುತ್ತಾ
ಈ ಬಾಗದಲ್ಲಿ ಪ್ರತಿಬಾನ್ವಿತರನ್ನು ಗುರುತಿಸಿ ಬೆನ್ನು ತಟ್ಡಿ ಪ್ರತ್ಸಾಹಿಸುವ ಕೆಲಸ ಮಾಡುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಪ್ರಶಂಸನೀಯಾವಾಗಿದೆ.
ಇದು ಸಂಘಸಂಸ್ಥೆಗಳ ಕರ್ತವ್ಯ ಎಂದು ತಿಳಿದು ಈ ರೀತಿಯಲ್ಲಿ ಎಲ್ಲರೂ ಸಹ ಗ್ರಾಮಿಣ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸುವಂತಹ ಕೆಲಸ ಮಾಡಿದರೆ ಪ್ರತಿಬಾನ್ವಿತರು ಮುಂದುವರಿಯಲು ಸಹಕಾರಿಯಾಗಲಿದೆ ಎಂದರು.
ಅತೀ ಹೆಚ್ಚು ಅಂಕ ಪಡೆದ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ . ವಿದ್ಯಾರ್ಥಿಗಳಾದಂಥಹ
ಎಸ್.ಎಸ್.ಪಿ.ಯು ಕಿರಿಕೊಡ್ಲಿ ಶಾಲೆಯ ದ್ವಿತೀಯ ಪಿಯುಸಿಯ ಬ್ರಂದಾ .ವಿ.ಆರ್ , ಮತ್ತು ಹತ್ತನೇ ತರಗತಿಯ ಸುಕನ್ಯ .ವಿ.ಆರ್, ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ
ಪಿಯುಸಿ ಯ ನಿಶಾಂತ್‌ಮಂಜು ,
ಹತ್ತನೇ ತರಗತಿಯ ನೂರೂಲ್ ಇಪ್ರಾ ರನ್ನು ಪುರಸ್ಕರಿಸಿ,
ಎಸ್.ಕೆ.ಎಸ್.ಕಲ್ಲುಮಠ ಶಾಲೆಯ ಚಂದ್ರಕಲಾ ರನ್ನು ಉತ್ತಮ ಶಿಕ್ಷಕಿ ಪುರಸ್ಕಾರ ವನ್ನು ನೀಡಿ ಸನ್ಮಾನಿಸಲಾಯಿತು,ವೇದಿಕೆಯಲ್ಲಿ ನಿರ್ಗಮಿತ ರೊಟರಿ ಅದ್ಯಕ್ಷರಾದ ಪ್ರವೀಣ್ ,ಮುಂದಿನ ಅದ್ಯಕ್ಷರಾದ ದಿನೇಶ್ ಮಿಲ್ ಉಪಸ್ಥಿತರಿದ್ದರು .
ಹೇಮಾವತಿ ರೊಟರಿ ಕೊಡ್ಲಿಪೇಟೆ ಅದ್ಯಕ್ಷ ಹೆಚ್.ಎಂ .ದಿವಾಕರ್ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಅಮ್ರತ್‌ಕುಮಾರ್ ನಿರೂಪಿಸಿ ವಂದಿಸಿದರು.
ಹೇಮಾವತಿ ರೋಟರಿ ಯ ಎಲ್ಲಾ ಸದಸ್ಯರುಗಳು
ಆಹ್ವಾನಿತ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.





No comments
Post a Comment