ನಾಪೋಕ್ಲು ವ್ಯಾಪ್ತಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ - ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ತುರ್ತು ಸಭೆ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲುವ್ಯಾಪ್ತಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ ಸಾರ್ವಜನಿಕರು ಸರ್ಕಾರದ ನಿಯಮ ಪಾಲಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳುವ ಬಗ್ಗೆ ಚರ್ಚಿಸಲು
ನಾಪೋಕ್ಲು ಗ್ರಾಮಪಂಚಾಯಿತಿಯಲ್ಲಿ ಈ ದಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತುರ್ತು ಸಭೆ ಕರೆಯಲಾಗಿತ್ತು.
ನಾಪೋಕ್ಲು ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಪಾಲಿಸದೆ ಸಾರ್ವಜನಿಕರು ಸುತ್ತಾಡುತ್ತಿದ್ದು
ಮತ್ತೊಂದು ಕಡೆ ಖಾಸಗಿ ಕ್ಲಿನಿಕ್ ಗಳು ಕೊರೋನಾ ರೋಗದ ಲಕ್ಷಣಗಳು ಇರುವ ರೋಗಿಗಳಿಗೆ ಆರೋಗ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಎಲ್ಲರೀತಿಯ ಚಿಕಿತ್ಸೆ ನೀಡುತ್ತಿರುವುದಾಗಿಯು ಆರೋಪ ಕೂಡಾ ಕೇಳಿ ಬಂದಿತ್ತು.ಇದರ ಸಂಬಂಧ ಹಾಗೂ ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಹಾಗೂ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋನ್ದಕ್ಕಿ ಮಾತನಾಡಿ ಖಾಸಗಿ ಕ್ಲಿನಿಕ್ ನಲ್ಲಿ ಸರ್ಕಾರದ ನಿಯಮ ಪಾಲಿಸದೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈಗಾಗಲೇ ನಾಪೋಕ್ಲುವಿನ ಖಾಸಗಿ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಅವರಲ್ಲಿ ಸೋಂಕು ಲಕ್ಷಣಗಳಿದ್ದ ರೋಗಿಗಳನ್ನು ಕಟ್ಟುನಿಟ್ಟಾಗಿ ಕರೋನಾ ಪರೀಕ್ಷೆಗೊಳಪಡಿಸಲು ತಿಳಿಸಿದ್ದು,
ಅವರು ಸಹ ಸೋಂಕಿನ ಲಕ್ಷಣಗಳಿರುವ ರೋಗಿಗಳನ್ನು ಪರೀಕ್ಷಿಸಿಕೊಳ್ಳಲು ಸಲಹೆನೀಡಿ ಕಳಿಸುತ್ತಿರುವುದಾಗಿ ಹೇಳಿದ್ದಾರೆ.ಖಾಸಗಿ ಕ್ಲಿನಿಕ್ ಗಳಲ್ಲಿ ರೋಗಲಕ್ಷಣಗಳು ಇರುವ ರೋಗಿಗಳನ್ನು ಪರೀಕ್ಷೆಗೊಳಪಡಿಸದೇ ಚಿಕಿತ್ಸೆ ನೀಡಿ ನೀಡುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸೋಮವಾರದಂದು ಪಂಚಾಯತಿ ವತಿಯಿಂದ ಧ್ವನಿವರ್ಧಕದ ಮೂಲಕ ನಾಪೋಕ್ಲು ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುವುದು ಹಿಂದೆಯೂ ಸಹ ಗ್ರಾಮ ಪಂಚಾಯಿತಿ ವತಿಯಿಂದ ಹಲವು ಬಾರಿ ಧ್ವನಿವರ್ಧಕದ ಮುಖಾಂತರ ಮತ್ತು ಭಿತ್ತಿಪತ್ರ ನೀಡುವ ಮುಖಾಂತರ ಜನರಲ್ಲಿ ಅರಿವು ಮೂಡಿಸಿದ್ದು,
ಕೊರೋನಾ ಮಹಾಮಾರಿ ತಡೆಗಟ್ಟಲು ಜನರ ಸಹಕಾರ ಬಹಳ ಮುಖ್ಯ ಇನ್ನು ಮುಂದೆಯೂ ಸಹ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಕಿರಣ್ ಆರ್, ಮಾತನಾಡಿ ನಾಪೋಕ್ಲು ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ದಿನೇದಿನೇ ಹೆಚ್ಚುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಓಡಾಡುತ್ತಿರುವವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದು.
ಇದರಿಂದ ಈಗಾಗಲೇ ಬಹುತೇಕ ಜನರು ಮಾಕ್ಸ್ ಧರಿಸಿ ಸಾಮಾಜಿಕ ಅಂತರ ಪಾಲಿಸುತ್ತಿದ್ದು.
ಪೊಲೀಸ್ ಇಲಾಖೆ ವತಿಯಿಂದ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇನ್ನು ಮುಂದೆಯೂ ಮಾಸ್ಕ ಧರಿಸದೆ ಓಡಾಡುತ್ತಿರುವವರಿಗೆ ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಾಗುವುದು.
ಬಹಳ ಮುಖ್ಯವಾಗಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಆರೋಗ್ಯ ಇಲಾಖೆ ವತಿಯಿಂದ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ.
ಪೊಲೀಸ್ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಸಮುದಾಯದ ಆರೋಗ್ಯ ಕೇಂದ್ರದ ವೈದ್ಯ ಮದನ್ ಮೋಹನ್ ಮಾತನಾಡಿ ಜನಸಾಮಾನ್ಯರಲ್ಲಿ ತಪ್ಪು ಕಲ್ಪನೆಯಿಂದ ಭಯಬೀತರಾಗಿ ಸೋಂಕಿನ ಲಕ್ಷಣಗಳಿದ್ದರೂ ಕೊರೋನಾ ಪರೀಕ್ಷೆ ಮಾಡಿಸಲು ಹಿಂಜರಿಯುತ್ತಿದ್ದು
ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದ ರೋಗಿಗಳಲ್ಲಿ ರೋಗಲಕ್ಷಣ ಇರುವವರು ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದರು.
ಬಹುತೇಕ ರೋಗಿಗಳು ಪರೀಕ್ಷೆ ಮಾಡಿಸದೆ ಹೋಗುತ್ತಿದ್ದು
ಜನರಲ್ಲಿ ಸೋಂಕು ದೃಢಪಟ್ಟರೆ ಯಾವುದೇ ಕಾರಣಕ್ಕೂ ಹಿಂದಿನ ಹಾಗೆ 14 ದಿನಗಳ ಕಾಲ ಕೋವಿದ ಕೇಂದ್ರದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಕೇವಲ2ಗಂಟೆಗಳ ಸಮಯ ಇನ್ನಿತರ ಅಗತ್ಯ ಆರೋಗ್ಯ ಪರಿಶೀಲನೆ ನಡೆಸಿದ ನಂತರ ಅವರವರ ಮನೆಗೆ ಕಳಿಸಲಾಗುವುದು.
ಇದನ್ನು ನಿರ್ಲಕ್ಷಿಸಿದರೆ ಸೋಂಕು ಇತರರಿಗೆ ಹರಡುಹು ದಲ್ಲದೆ ಮಕ್ಕಳಿಗೆ ವೃದ್ಧರಿಗೆ ಹೃದಯ ಸಂಬಂಧಿ ರಕ್ತದೊತ್ತಡ ಸಕ್ಕರೆ ಕಾಯಿಲೆ ಇರುವಂತ ರೋಗಿಗಳಿಗೆ ಹರಡಿದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಯಾರು ಸಹ ನಿರ್ಲಕ್ಷ್ಯ ವಹಿಸದೆ ಸರ್ಕಾರದ ನಿಯಮ ಪಾಲಿಸಿ ತನ್ನ ಜೀವದೊಂದಿಗೆ ತನ್ನ ಸಹಪಾಠಿಗಳ ಜೀವನವನ್ನು ಉಳಿಸುವ ಸಲುವಾಗಿ ಸಹಕರಿಸಬೇಕಾಗಿದೆ. ಅದಲ್ಲದೆ ತನ್ನ ಹಾಗೂ ತನ್ನ ಸಹಪಾಠಿಗಳ ಜೀವಕ್ಕೆ ಸ್ವಯಂ ಕುತ್ತು ತಂದ ಹಾಗೆ ಆಗುತ್ತದೆ ಎಂದ ಅವರು
ಇದೇ ರೀತಿ ನಿರ್ಲಕ್ಷ ಮುಂದುವರೆದರೆ ನಾಪೋಕ್ಲು ಕೊರೋನಾ ಹಾಟ್ಸ್ಪಾಟ್ ಆದರೆ ಅಚ್ಚರಿಪಡಬೇಕಾಗಿಲ್ಲ.
ಇದರ ಸಂಬಂಧ ಗ್ರಾಮ ಪಂಚಾಯಿತಿ ಆರೋಗ್ಯ ಕಾರ್ಯಕರ್ತರು ಆಶಾ ಕಾರ್ಯಕರ್ತರು ಜೊತೆಜೊತೆಯಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಕೊರೋನಾ ಟಾಸ್ಕ್ ಫೋರ್ಸ್ ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಜನರಲ್ಲಿ ಕೊರೋನಾ ಸೋಂಕು ಹರಡದಂತೆ ಜನಸಾಮಾನ್ಯರಲ್ಲಿ ಯಾವ ರೀತಿ ಅರಿವು ಮೂಡಿಸಿ ಕ್ರಮಕೈಗೊಳ್ಳಬೇಕೆಂದು ಚರ್ಚಿಸಲಾಯಿತು.
ಗ್ರಾಮಲೆಕ್ಕಿಗೆ ಅಮೃತ ಮಾತನಾಡಿ
ಈ ಹಿಂದೆ ಕೊರೋನ ದೃಢಪಟ್ಟ ಮನೆಯನ್ನು ಸೀಲ್ ಡೌನ್ ಮಾಡಲು ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಸಿಬ್ಬಂದಿ ಪಂಚಾಯತಿ ಸಿಬ್ಬಂದಿ ಬಂದು ಸಹಕರಿಸುತ್ತಿದ್ದು,
ಇದೀಗ ಕಂದಾಯ ಇಲಾಖೆ ಸಿಬ್ಬಂದಿಗಳು ಮಾತ್ರ
ಸೋಂಕು ಧೃಡಪಟ್ಟ ಮನೆಗಳಿಗೆ ಹೋಗಿ ಸೀಲ್ ಡೌನ್ ಮಾಡುತ್ತಿದ್ದು ,
ಬೇರೆ ಯಾವ ಇಲಾಖೆ ಸಿಬ್ಬಂದಿ ಸಹ ನಮಗೆ ಸಹಕಾರ ನೀಡುತ್ತಿಲ್ಲ, ಆದ್ದರಿಂದ ನಮಗೆ ಬಹಳ ಸಮಸ್ಯೆಯಾಗುತ್ತಿತ್ತು ಈ ಕಾರ್ಯಕ್ಕೆ ಹಿಂದಿನ ಹಾಗೆ ತಮ್ಮೆಲ್ಲರ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.
ಸಭೆಯಲ್ಲಿ ನಾಪೋಕ್ಲು ಆರೋಗ್ಯ ಕೇಂದ್ರದ ದಂತವೈದ್ಯರಾದ ಕುಶಾಲ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿಗಳು
ಇನ್ನಿತರರು ಹಾಜರಿದ್ದರು.




No comments
Post a Comment