ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಸೋಮವಾರ ಕೊಡಗು ಬಂದ್ - ಪ್ರತಿಭಟನೆಗೆ ನಿರ್ಧಾರ

No comments

ಮಡಿಕೇರಿ (Times Of Coorg) : ಕೇಂದ್ರ ಸಕಾ೯ರದ ಕಾಮಿ೯ಕ ವಿರೋಧಿ ನೀತಿ ಮತ್ತು ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಸಕಾ೯ರದ ಜನವಿರೋಧಿ ಕ್ರಮಗಳನ್ನು ಖಂಡಿಸಿ ಸೆ.28 ರಂದು  ಸೋಮವಾರ ರಾಜ್ಯವ್ಯಾಪಿ ಕಾಮಿ೯ಕ ಮತ್ತು ರೈತ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಕೊಡಗಿನಲ್ಲಿಯೂ ಬೆಂಬಲ ನೀಡಲು ನಿಧ೯ರಿಸಲಾಗಿದೆ.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬಿಜೆಪಿಯೇತರ ಪಕ್ಷಗಳು, ಕಾಮಿ೯ಕ, ರೈತ ಸಂಘಟನೆಗಳ ಪ್ರಮುಖರ ಸಭೆ ನಡೆಸಿ ಸೋಮವಾರ ಕೊಡಗು ಜಿಲ್ಲೆಯಲ್ಲಿ ವತ೯ಕರ ಸಂಘ ಹಾಗೂ ಮೋಟಾರ್ ವಾಹನ ಮಾಲೀಕರ ಸಂಘದ ಬೆಂಬಲ ಕೋರಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡಲು ತೀಮಾ೯ನಿಸಲಾಗಿದೆ.ಕೇಂದ್ರ ಮತ್ತು ರಾಜ್ಯ ಸಕಾ೯ರಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲೂ ನಿಧಾ೯ರಸಿಲಾಯಿತು

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜೆಡಿಎಸ್ ನ ಇಸಾಕ್ ಖಾನ್, ಐಎನ್ ಟಿಯುಸಿ ಮುಖಂಡ ನಾಪಂಡ ಮುತ್ತಪ್ಪ,  ನೆರವಂಡ ಉಮೇಶ್, ಎಸ್.ಡಿ.ಪಿ.ಐ. ಅಮೀನ್ ಮೊಹಿಸಿನ್, ದಲಿತಸಂಘಟನೆಯ ಕೆ.ಬಿ.ರಾಜು, ಪ್ರಗತಿ ಪರ ಸಂಘಟನೆಯ ಎಚ್.ಎಂ.ಕಾವೇರಿ ಸೇರಿದಂತೆ ಅನೇಕರ ಸಭೆಯಲ್ಲಿ ಚಚೆ೯ ಬಳಿಕ ಕೊಡಗು ಬಂದ್ , ಪ್ರತಿಭಟನೆಗೆ ತೀಮಾ೯ನಸಿಲಾಗಿದೆ.ಕೊಡಗಿನ ಜನ ಬಂದ್ ಗೆ  ಸಹಕರಿಸುವಂತೆ ಮುಖಂಡರಿಂದ ಮನವಿ ಮಾಡಿದ್ದಾರೆ.

No comments

Post a Comment